ADVERTISEMENT

ಚಾಮರಾಜನಗರ: BRT ಬೇಡುಗುಳಿ ಬಳಿ ಹುಲಿ ದಾಳಿಗೆ ಹಾಡಿ ಮಹಿಳೆ ಬಲಿ, ಯುವಕನಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 10 ಜೂನ್ 2025, 11:43 IST
Last Updated 10 ಜೂನ್ 2025, 11:43 IST
<div class="paragraphs"><p>ಹುಲಿ ದಾಳಿಯಿಂದ ಮೃತಪಟ್ಟಿರುವ ರಂಗಮ್ಮ</p></div>

ಹುಲಿ ದಾಳಿಯಿಂದ ಮೃತಪಟ್ಟಿರುವ ರಂಗಮ್ಮ

   

ಚಾಮರಾಜನಗರ: ತಾಲ್ಲೂಕಿನ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಬೇಡುಗುಳಿ ವಲಯದಲ್ಲಿ ಹುಲಿ ದಾಳಿಗೆ ಮಹಿಳೆ ಬಲಿಯಾಗಿದ್ದು ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಬೇಡಗುಳಿ ಹಾಡಿಯ ರಂಗಮ್ಮ ಮೃತ ಮಹಿಳೆ. ರಾಮಯ್ಯನ ಪೋಡಿನ ರವಿ ಎನ್ನುವರು ಗಾಯಗೊಂಡವರು.

ADVERTISEMENT

ಮೃತ ರಂಗಮ್ಮ ಮಂಗಳವಾರ ಬೆಳಗಿನ ಜಾವ ಬಹಿರ್ದೆಸೆಗೆ ಹೋಗಿದ್ದಾಗ ಹುಲಿ ದಾಳಿ ಮಾಡಿದ್ದು ಕೊಂದು ಹಾಕಿದೆ. ಸೋಮವಾರ ರಾತ್ರಿ ರವಿ ಹಾಡಿಗೆ ಮರಳುವಾಗ ಹುಲಿ ದಾಳಿ ಮಾಡಿದ್ದು ಅವರ ಕಿರುಚಾಟ ಕೇಳಿ ನೆರವಿಗೆ ಧಾವಿಸಿದ ಸ್ಥಳೀಯರು ಹುಲಿಯನ್ನು ಓಡಿಸಿದ್ದಾರೆ. ರವಿ ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು ಚಾಮರಾಜನಗರದ ಸಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಒಂದೇ ಹುಲಿಯಿಂದ ದಾಳಿ:‌ ರಂಗಮ್ಮ ಹಾಗೂ ರವಿ ಮೇಲೆ ದಾಳಿ ನಡೆಸಿರುವ ಹುಲಿ ಒಂದೇ ಆಗಿದ್ದು ಕಾರ್ಯಾಚರಣೆ ಮೂಲಕ ಸೆರೆ ಹಿಡಿಯಲಾಗಿದೆ ಎಂದು ಬಿಆರ್‌ಟಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎಸ್‌.ಶ್ರೀಪತಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.