ADVERTISEMENT

3 ಪಕ್ಷಗಳ ನಾಯಕತ್ವ ಬದಲಾಗದಿದ್ದರೆ ಎಎಪಿ ಅಧಿಕಾರಕ್ಕೆ: ಬಿಜೆಪಿಯ ಲೆಹರ್‌ ಸಿಂಗ್‌

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2022, 5:17 IST
Last Updated 18 ಮಾರ್ಚ್ 2022, 5:17 IST
ವಿಧಾನ ಪರಿಷತ್‌ನ ಬಿಜೆಪಿ ಸದಸ್ಯ ಲೆಹರ್ ಸಿಂಗ್ ಸಿರೋಯಾ
ವಿಧಾನ ಪರಿಷತ್‌ನ ಬಿಜೆಪಿ ಸದಸ್ಯ ಲೆಹರ್ ಸಿಂಗ್ ಸಿರೋಯಾ   

ಬೆಂಗಳೂರು:‘ರಾಜ್ಯದಲ್ಲಿ ಪ್ರಮುಖವಾಗಿರುವ ಮೂರೂ ಪಕ್ಷಗಳ ನಾಯಕತ್ವ ಬದಲಾವಣೆಯಾಗದಿದ್ದರೆ ಅವುಗಳು ದೂಳಿಪಟವಾಗುತ್ತವೆ. ದೆಹಲಿ ರೀತಿಯಲ್ಲಿ ಆಮ್ ಆದ್ಮಿ ಪಕ್ಷವು ಎಲ್ಲರನ್ನೂ ದೂಳಿಪಟ ಮಾಡುತ್ತದೆ’ ಎಂದು ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ವಿಧಾನ ಪರಿಷತ್‌ನ ಬಿಜೆಪಿ ಸದಸ್ಯ ಲೆಹರ್ ಸಿಂಗ್ ಸಿರೋಯಾ ಎಚ್ಚರಿಕೆ ನೀಡಿದರು.

ವಿಧಾನ ಪರಿಷತ್‌ನಲ್ಲಿ ಗುರುವಾರ ಬಜೆಟ್‌ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಲೆಹರ್‌ ಸಿಂಗ್‌, ‘ನಾನು 12 ವರ್ಷಗಳಿಂದ ಸದನದಲ್ಲಿದ್ದೇನೆ. ಪಕ್ಷ ನನಗೆ ಎರಡು ಅವಧಿಗೆ ಅವಕಾಶ‌ ನೀಡಿದೆ. ‌ಮತ್ತೆ ನಾನು ಅವಕಾಶ ಕೇಳುವುದಿಲ್ಲ. ಹೊಸಬರಿಗೆ ಅವಕಾಶ ಮಾಡಿಕೊಡಬೇಕಾಗುತ್ತದೆ. ಹಾಗಾಗಿ, ಇದೇ ನನ್ನ ಕಡೆಯ ಭಾಷಣ’ ಎಂದುಹೇಳಿದರು.

‘ಇವತ್ತು ಜಾತಿ ಆಧಾರದಲ್ಲಿ ನಿಗಮ-ಮಂಡಳಿಗೆ ನೇಮಕ ಮಾಡಲಾಗುತ್ತಿದೆ. ಅದೇ ರೀತಿ ಜಾತಿ ಆಧಾರದ ಮೇಲೆಯೇ ಬಜೆಟ್‌ ರೂಪಿಸಲಾಗುತ್ತಿದೆ. ಇಂತಹ ವ್ಯವಸ್ಥೆ ಬದಲಾಗಬೇಕು’ ಎಂದು ಸಲಹೆ ನೀಡಿದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.