ಅರಣ್ಯ ಅಧಿಕಾರಿಯಾಗಬೇಕು ಎಂಬ ಕನಸು ನನಸಾಗದೇ ಇದ್ದಾಗ, ವೈಯಕ್ತಿಕ ಆಸಕ್ತಿಯಿಂದಲಾದರೂ ಅರಣ್ಯ, ವನ್ಯಜೀವಿ ಸಂರಕ್ಷಣೆ ಕಾರ್ಯ ಮಾಡಬೇಕು ಎಂದು ಹೊರಟವರು ಬೆಳಗಾವಿಯ ಗಿರಿಧರ ಕುಲಕರ್ಣಿ. ಮಾಹಿತಿ ಹಕ್ಕು ಕಾಯ್ದೆಯ ನೆರವಿನಿಂದ ಪಶ್ಚಿಮ ಘಟ್ಟ ಸಂರಕ್ಷಣೆಯ ಕೆಲಸ ಮಾಡುತ್ತಿರುವ ಇವರು, ಪಶ್ಚಿಮ ಘಟ್ಟ ಪ್ರದೇಶದ ವ್ಯಾಪ್ತಿಯಲ್ಲಿ ತಲೆ ಎತ್ತಲಿದ್ದ ಹಲವು ನಿರ್ಮಾಣ ಯೋಜನೆಗಳನ್ನು ತಡೆದಿದ್ದಾರೆ. ಈ ಪ್ರಯತ್ನದ ವೇಳೆ, ಹಲವು ಬಾರಿ ರಾಜಕಾರಣಿಗಳಿಂದ ಬೆದರಿಕೆಯನ್ನೂ ಎದುರಿಸಿದ್ದಾರೆ. ಆದರೂ, ವನ್ಯಜೀವಿ, ಪರಿಸರ ಸಂರಕ್ಷಣೆಯಲ್ಲಿ ತಮ್ಮ ಹೋರಾಟ ಮುಂದುವರಿಸಿದ್ದಾರೆ. ಅವರ ಹೋರಾಟದ ಚಿತ್ರಣ ಈ ವಿಡಿಯೊದಲ್ಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.