ADVERTISEMENT

ಪೊಲೀಸ್‌ ಪಡೆಗೂ ‘ಅಗ್ನಿವೀರ’ ಸೈನಿಕರ ಭರ್ತಿ: ಆರಗ ಜ್ಞಾನೇಂದ್ರ

​ಪ್ರಜಾವಾಣಿ ವಾರ್ತೆ
Published 17 ಜೂನ್ 2022, 20:15 IST
Last Updated 17 ಜೂನ್ 2022, 20:15 IST
ಆರಗ ಜ್ಞಾನೇಂದ್ರ
ಆರಗ ಜ್ಞಾನೇಂದ್ರ   

ಬೆಂಗಳೂರು: ‘ಅಗ್ನಿಪಥ’ ಯೋಜನೆಯಡಿ ತರಬೇತಿ ಪಡೆದು ಬರುವ ‘ಅಗ್ನಿವೀರ’ ಸೈನಿಕರನ್ನು ರಾಜ್ಯ ಪೊಲೀಸ್‌ ಇಲಾಖೆಯಲ್ಲೂ ಭರ್ತಿ ಮಾಡಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ಸೇನೆಯ ಹೊಸ ನೇಮಕಾತಿ ನೀತಿಯನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯನ್ನು ಖಂಡಿಸಿದ ಅವರು, ‘4 ವರ್ಷ ಸೇನೆಯಲ್ಲಿ ತರಬೇತಿ ಪಡೆದು ಬರುವ ‘ಅಗ್ನಿವೀರ’ ಸೈನಿಕರಿಗೆ ರಾಜ್ಯದ ಪೊಲೀಸ್‌ ಪಡೆಗೆ ಭರ್ತಿ ಮಾಡಿಕೊಳ್ಳುವ ಉದ್ದೇಶವಿದೆ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು. ಉತ್ತರಪ್ರದೇಶ ಮತ್ತು ಮಧ್ಯ ಪ್ರದೇಶದಲ್ಲೂ ಇಂತಹ ಯೋಜನೆಯನ್ನು ಪ್ರಕಟಿಸಲಾಗಿದೆ.

‘ಯುವಕರು ಕೇವಲ ₹5,000ಕ್ಕೆ ವಿವಿಧ ಉದ್ಯೋಗಗಳಿಗೆ ಸೇರುತ್ತಿದ್ದಾರೆ. ಅಗ್ನಿಪಥ ಯೋಜನೆ ಲಕ್ಷಾಂತರ ಯುವಕರಿಗೆ ಪ್ರಯೋಜನವಾಗಲಿದೆ. ಸೇನೆಯಲ್ಲಿ ಸೇವೆ ಸಲ್ಲಿಸಿ ಬಂದ ನಂತರ ಪೊಲೀಸ್‌, ಇತರ ಭದ್ರತಾ ಸಂಸ್ಥೆಗಳೂ ಸೇರಿ ಯಾವುದೇ ಸೇವೆಗಳಿಗೂ ಸೇರಲು ಅವಕಾಶವಿದೆ. ಆದರೆ ಯಾವ ಕಾರಣಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.