ADVERTISEMENT

ಕಲಾವಿದೆ ಶಾಂತಮ್ಮ ಪತ್ತಾರ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2020, 18:40 IST
Last Updated 14 ಅಕ್ಟೋಬರ್ 2020, 18:40 IST
ಶಾಂತಮ್ಮ ಪತ್ತಾರ
ಶಾಂತಮ್ಮ ಪತ್ತಾರ   

ಇಳಕಲ್ (ಬಾಗಲಕೋಟೆ ಜಿಲ್ಲೆ): ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ರಂಗಭೂಮಿಯ ಹಿರಿಯ ಕಲಾವಿದೆ, ಗಾಯಕಿ ಶಾಂತಮ್ಮ ಪತ್ತಾರ (74) ನಗರದಲ್ಲಿ ಬುಧವಾರ ನಿಧನರಾದರು. ಅವರಿಗೆ ಮೂವರು ಪುತ್ರಿಯರು ಇದ್ದಾರೆ.

13ನೇ ವಯಸ್ಸಿನಲ್ಲಿ ಬಳ್ಳಾರಿಯ ಲಲಿತ ಕಲಾ ಸಂಘದ ಮೂಲಕ ರಂಗಭೂಮಿ ಪ್ರವೇಶಿಸಿದ ಶಾಂತಮ್ಮ, ಎಚ್‌.ಟಿ. ಮಹಾಂತೇಶ ಶಾಸ್ತ್ರಿಗಳ ನಿರ್ದೇಶನದ ‘ಅಕ್ಕ–ತಂಗಿ’ ನಾಟಕದ ‘ಮಾಧುರಿ’ ಪಾತ್ರದ ಮೂಲಕ ರಂಗಪಯಣ ಆರಂಭಿಸಿದ್ದರು.

ನಂತರ ರೇಣುಕಾಚಾರ್ಯ ನಾಟ್ಯ ಸಂಘ, ಕಮತಗಿಯ ಬಿ.ಆರ್‌. ಅರಿಶಿಣಗೋಡಿ ಅವರ ‘ಶ್ರೀ ಹುಚ್ಚೇಶ್ವರ ನಾಟ್ಯ ಸಂಘ’, ಬಸವರಾಜ ಗುಡಗೇರಿ ಅವರ ಸಂಗಮೇಶ್ವರ ನಾಟ್ಯ ಸಂಘ, ಮಹಾಕೂಟೇಶ್ವರ ನಾಟ್ಯ ಸಂಘ, ಶಿವಯೋಗಮಂದಿರದ ಕುಮಾರೇಶ್ವರ ನಾಟ್ಯ ಸಂಘ ಹೀಗೆ ಹಲವಾರು ಕಂಪನಿಗಳ ನಾಟಕಗಳಲ್ಲಿ ನಾಯಕಿಯಾಗಿ ಅಭಿನಯಿಸಿದರು. ಕಂದಗಲ್‌ ಹನಮಂತರಾಯರು, ಎಚ್‌.ಆರ್‌. ಭಸ್ಮೆ, ಪಿ.ಬಿ. ಧುತ್ತರಗಿ, ಎಚ್‌.ಎನ್. ಹೂಗಾರ, ಆರ್‌.ಡಿ. ಕಾಮತ್‌ರಂತಹ ದಿಗ್ಗಜರ ಜತೆ ಶಾಂತಮ್ಮ ಕೆಲಸ ಮಾಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.