ADVERTISEMENT

Maddur Clash| ಹಿಂದೂಗಳಿಗೆ ಲಾಠಿ ಏಟು: ಕಾಂಗ್ರೆಸ್ ಸರ್ಕಾರದ 6ನೇ ಗ್ಯಾರಂಟಿ–ಅಶೋಕ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಸೆಪ್ಟೆಂಬರ್ 2025, 14:37 IST
Last Updated 8 ಸೆಪ್ಟೆಂಬರ್ 2025, 14:37 IST
<div class="paragraphs"><p>ಆರ್‌. ಅಶೋಕ</p></div>

ಆರ್‌. ಅಶೋಕ

   

ಬೆಂಗಳೂರು: ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರ ಮುಂದಿನ ವರ್ಷ ಗಣೇಶೋತ್ಸವವನ್ನೇ ಬ್ಯಾನ್ ಮಾಡಿದರೂ ಅಚ್ಚರಿಯಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಕಿಡಿಕಾರಿದ್ದಾರೆ.

ಸಾಮಾಜಿಕ ಮಾಧ್ಯಮ ಎಕ್ಸ್‌ವಲ್ಲಿ ಪೋಸ್ಟ್‌ ಮಾಡಿರುವ ಅವರು, 'ಹಿಂದುಗಳಿಗೆ ಲಾಠಿ ಏಟು- ಕಾಂಗ್ರೆಸ್ ಸರ್ಕಾರದ ಆರನೇ ಗ್ಯಾರಂಟಿ. ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಗಣೇಶ ಮೂರ್ತಿಗೆ ಕಲ್ಲು ಹೊಡೆದ ಮುಸ್ಲಿಂ ಮತಾಂಧ ಪುಂಡರಿಗೆ ರಕ್ಷಣೆ, ಅಮಾಯಕ ಹಿಂದುಗಳಿಗೆ ದೊಣ್ಣೆ ಏಟು. ಈ ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರ ತೊಲಗುವವರೆಗೂ ಕನ್ನಡಿಗರಿಗೆ ನೆಮ್ಮದಿ ಇಲ್ಲ' ಎಂದು ಬರೆದುಕೊಂಡಿದ್ದಾರೆ.

ADVERTISEMENT

'ಸಿಎಂ ಸಿದ್ದರಾಮಯ್ಯ ಅವರೇ, ನಿಮ್ಮ so-called secular, ಜಾತ್ಯತೀತ ಸರ್ಕಾರದಲ್ಲಿ ಹಿಂದೂಗಳು ಹೇಗೆ ಎರಡನೇ ದರ್ಜೆ ಪ್ರಜೆಗಳಾಗಿದ್ದಾರೆ ಎನ್ನುವುದನ್ನ ಈ ಹೆಣ್ಣುಮಗಳು ಬಹಳ ಚೆನ್ನಾಗಿ ಹೇಳಿದ್ದಾಳೆ ನೋಡಿ‘ ಎಂದು ಎಕ್ಸ್‌ನಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿದ್ದಾರೆ.

ಹಿಂದೂಗಳ ಕ್ಷಮೆ ಕೇಳುತ್ತೀರಾ?

ಡಿಸಿಎಂ ಡಿ.ಕೆ ಶಿವಕುಮಾರ್‌ ಅವರೇ, ನಿಮ್ಮ so-called 'ಬ್ರದರ್ಸ್'ಗಳು ಹೇಗೆ ಹಿಂದೂಗಳ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ ಎನ್ನುವುದನ್ನು ಕಿವಿಗೊಟ್ಟು ಕೇಳಿ ಸ್ವಾಮಿ. 'ನಮಸ್ತೇ ಸದಾ ವತ್ಸಲೇ' ಎಂದು ಹೇಳಿದ್ದಕ್ಕೆ ವಾರ್ನಿಂಗ್ ಬಂದ ಕೂಡಲೇ ಎದ್ದೆನೋ ಬಿದ್ದೆನೋ ಎಂದು ಹೆದರಿಕೊಂಡು ಸುದ್ದಿಗೋಷ್ಠಿ ಮಾಡಿ ಹೈಕಮಾಂಡ್ ನಾಯಕರಿಗೆ ಕ್ಷಮೆ ಕೇಳಿದರಲ್ಲ, ಈಗ ಗಣೇಶೋತ್ಸವಕ್ಕೆ ಭದ್ರತೆ ಕೊಡಲಾಗದ ತಾವು ಹಿಂದೂಗಳ ಕ್ಷಮೆ ಕೇಳುತ್ತೀರಾ? ಎಂದೂ ಪ್ರಶ್ನಿಸಿದ್ದಾರೆ.

ಮದ್ದೂರಿನಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಭಕ್ತರು ಕಲ್ಲು ತೂರಾಟಕ್ಕೆ ಒಳಗಾಗಿ, ಅನೇಕರು ಗಾಯಗೊಂಡಿದ್ದಾರೆ. ರಾಜ್ಯ ಸರ್ಕಾರದ ಭದ್ರತಾ ವೈಫಲ್ಯ ಹಾಗೂ ಮೃದು ಧೋರಣೆಯಿಂದ ಗಣೇಶನ ಭಕ್ತರ ಮೇಲೆ ಕಿಡಿಗೇಡಿಗಳು ದಾಳಿ ನಡೆಸಿರುವುದನ್ನು ಖಂಡಿಸುತ್ತೇವೆ. ತಕ್ಷಣ ತಪ್ಪಿತಸ್ಥರನ್ನು ಬಂಧಿಸಿ, ಕಠಿಣ ಕಾನೂನು ಕ್ರಮಕ್ಕೆ ಆದೇಶಿಸಿ, ಶಾಂತಿ ಸುವ್ಯವಸ್ಥೆ ಕಾಪಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಅವರನ್ನು ಆಗ್ರಹಿಸುತ್ತೇನೆ
ಸುಮಲತಾ ಅಂಬರೀಷ್‌, ಮಾಜಿ ಸಂಸದೆ, ನಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.