ADVERTISEMENT

ವಿಧಾನಸಭೆ | ಬಾಲ ಗರ್ಭಿಣಿಯರು ಹೆಚ್ಚಲು ಜಾಲತಾಣ ಕಾರಣ: ಜೆಡಿಎಸ್‌ನ ಸುರೇಶ್‌ ಬಾಬು

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2025, 16:02 IST
Last Updated 13 ಆಗಸ್ಟ್ 2025, 16:02 IST
<div class="paragraphs"><p>ವಿಧಾನಸೌಧ</p></div>

ವಿಧಾನಸೌಧ

   

ಬೆಂಗಳೂರು: ‘ರಾಜ್ಯದಲ್ಲಿ ಬಾಲ ಗರ್ಭಿಣಿಯರ ಸಂಖ್ಯೆ ಹೆಚ್ಚಲು ಸಾಮಾಜಿಕ ಜಾಲತಾಣಗಳಲ್ಲಿ ಲಂಗೂ ಲಗಾಮು ಇಲ್ಲದೇ ಪ್ರಸಾರವಾಗುವ ಅಶ್ಲೀಲ, ಲೈಂಗಿಕ ಕಾರ್ಯಕ್ರಮಗಳೇ ಕಾರಣ. ಇವುಗಳಿಗೆ ಕಡಿವಾಣ ಹಾಕಬೇಕು’ ಎಂದು ಜೆಡಿಎಸ್‌ನ ಸುರೇಶ್‌ ಬಾಬು ಒತ್ತಾಯಿಸಿದರು.

ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ‘ಕಳೆದ 20 ತಿಂಗಳಲ್ಲಿ 26,463 ಬಾಲಕಿಯರು ಗರ್ಭ ಧರಿಸಿದ್ದಾರೆ. ಇದು ಆತಂಕದ ವಿಚಾರ’ ಎಂದು ಕಳವಳ ವ್ಯಕ್ತಪಡಿಸಿದರು.

ADVERTISEMENT

‘ಇನ್ನೂ ಪ್ರಪಂಚದ ಅರಿವೇ ಇಲ್ಲದ ಸಮಯದಲ್ಲಿ ಪ್ರೀತಿ–ಪ್ರೇಮ ಎಂದು ಬಾಲಕಿಯರು ಮೋಸ ಹೋಗುತ್ತಿದ್ದಾರೆ. ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಲೈಂಗಿಕತೆಗೆ ಉತ್ತೇಜನ ನೀಡುವ ಜಾಹೀರಾತುಗಳು ಪ್ರಭಾವ ಬೀರುತ್ತಿವೆ. ಇವುಗಳ ಮೇಲೆ ನಿಗಾ ಇಡುವುದರ ಜತೆಗೆ ಕಡಿವಾಣ ಹಾಕಬೇಕು’ ಎಂದು ಆಗ್ರಹಿಸಿದರು.

‘ಹೀಗೆ ಮೋಸ ಹೋಗುವ ಬಾಲಕಿಯರನ್ನು ಅವರ ಕುಟುಂಬಗಳೂ ದೂರ ಮಾಡುತ್ತಿವೆ. ಅವರು ಕಣ್ಣೀರಿನ ಜೀವನ ಸಾಗಿಸಬೇಕಾಗುತ್ತದೆ. ಈ ಬಗ್ಗೆ ಸರ್ಕಾರ ಗಮನಹರಿಸಬೇಕು. ಇದನ್ನು ತಡೆಯಲು ಅಗತ್ಯ ಶಿಕ್ಷಣ ಮತ್ತು ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಅತ್ಯಾಚಾರ ಎಸಗುವವರನ್ನು ಶಿಕ್ಷಿಸಬೇಕು’ ಎಂದು ಸುರೇಶ್‌ ಬಾಬು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.