ADVERTISEMENT

ಕೊರೊನಾ ಸೋಂಕು ಹರಡುತ್ತಿರುವ ತಬ್ಲೀಗ್‌ಗಳಿಗೆ ಗುಂಡಿಕ್ಕಿ: ಯತ್ನಾಳ ಟ್ವೀಟ್‌

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2020, 11:23 IST
Last Updated 8 ಏಪ್ರಿಲ್ 2020, 11:23 IST
ಬಸನಗೌಡ ಪಾಟೀಲ ಯತ್ನಾಳ
ಬಸನಗೌಡ ಪಾಟೀಲ ಯತ್ನಾಳ    

ವಿಜಯಪುರ: ‘ಕೊರೊನಾ ಸೋಂಕು ಹರಡುತ್ತಿರುವ ತಬ್ಲೀಗ್‌ಗಳಿಗೆ ಗುಂಡಿಕ್ಕಿ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಟ್ವಿಟರ್‌ ಮತ್ತು ಫೇಸ್‌ಬುಕ್‌ ಮೂಲಕ ಸರ್ಕಾರವನ್ನು ಆಗ್ರಹಿಸಿದ್ದಾರೆ.

‘ಕಾನೂನು ಕ್ರಮದ ಎಚ್ಚರಿಕೆ ಕೊಡಬೇಕಾಗಿರುವುದು ಕೊರೊನಾ ಸೋಂಕು ಹಬ್ಬಿಸುತ್ತಿರುವ ಮತಾಂಧರಿಗೆ ಹಾಗೂ ಅವರನ್ನು ಬೆಂಬಲಿಸುತ್ತಿರುವ ಧಾರ್ಮಿಕ, ರಾಜಕೀಯ ನಾಯಕರಿಗೆ ಹೊರತು, ದೇಶಭಕ್ತ ಸಮುದಾಯಗಳಿಗೆ ಅಲ್ಲ’ ಎಂದು ಮಂಗಳವಾರ ರಾತ್ರಿ ಟ್ವೀಟ್‌ ಮಾಡಿದ್ದಾರೆ.

‘ತಬ್ಲೀಗ್‌ ಜಮಾತ್‌ ಜಿಹಾದಿಗಳಿಗೆ ಅಂತಿಮ ಎಚ್ಚರಿಕೆ ಕೊಡಿ, ಸಹಕಾರ ನೀಡದಿದ್ದರೆ ಗುಂಡಿಕ್ಕಿ. ನನ್ನ ಹೇಳಿಕೆ ನಿಮಗೆ ಪ್ರಚೋದನೆ ಎನಿಸಿದರೆ ನನ್ನ ಮೇಲೆ ಕ್ರಮಕೈಗೊಳ್ಳಿ’ ಎಂದು ಬರೆದುಕೊಂಡಿದ್ದಾರೆ.

ADVERTISEMENT

ಇದೇ ಹೇಳಿಕೆಯನ್ನು ತಮ್ಮ ಫೇಸ್‌ಬುಕ್‌ ಖಾತೆಯಲ್ಲೂ ಹಂಚಿಕೊಂಡಿದ್ದಾರೆ. ಯತ್ನಾಳರ ಹೇಳಿಕೆಗೆ ಪರ, ವಿರೋಧ ಅಭಿಪ್ರಾಯ ವ್ಯಕ್ತವಾಗಿವೆ.

ಹೇಳಿಕೆಗೆ ಬೆಂಬಲ:‘ಕೆಲವರು ಬ್ಲೂಫಿಲ್ಮ್‌ ನೋಡಿ ಮಂತ್ರಿಯಾದರು, ಯತ್ನಾಳ್ರು ಹಿಂದುಗಳ ಹೃದಯ ಗೆದ್ದು; ಹಿಂದೂ ಹುಲಿ ಅನಿಸಿಕೊಂಡರು. ಜನರಿಗೆ ಗೊತ್ತು ಯಾರ ತಾಕತ್ತು ಏನು ಅಂತಾ’ ಎಂದು ಮುತ್ತು ಶಾಬದ್‌ ಎಂಬುವವರು ಪ್ರತಿಕ್ರಿಯಿಸಿದ್ದಾರೆ.

‘ಕರ್ನಾಟಕ ರಾಜ್ಯದ ಹಿಂದೂ ಕಾರ್ಯಕರ್ತರ ರಾಜ್ಯ ಬಿಜೆಪಿ ಸರ್ಕಾರದ ನೂತನ ಮುಖ್ಯಮಂತ್ರಿ ಬಸನಗೌಡ ಪಾಟೀಲ ಯತ್ನಾಳ’,‘ಗೌಡ್ರೆ ಸರಿಯಾಗಿ ಹೇಳಿದ್ರಿ’, ‘ಬಹುನಿರೀಕ್ಷಿತ ಹೇಳಿಕೆ ನಮ್ಮ ಹೆಮ್ಮೆಯ ಯತ್ನಾಳಜಿ’, ‘ಮತ್ತೊಮ್ಮೆ ಗರ್ಜಿಸಿದ ಹುಲಿ’, ‘ನೀವು ಹೇಳಿದ ಮಾತು ನೂರಕ್ಕೆ ನೂರರಷ್ಟು ಸತ್ಯ’ ಎಂದು ಅವರ ಬೆಂಬಲಿಗರು ಪ್ರತಿಕ್ರಿಯಿಸಿದ್ದಾರೆ.

ಕ್ಷಮೆಗೆ ಒತ್ತಾಯ:‘ಅಲ್ಪ ಸಂಖ್ಯಾತರ ಬಗ್ಗೆ ನಾಲಿಗೆ ಹರಿಬಿಡುವ ಮೂಲಕ ಶಾಸಕ ಯತ್ನಾಳ ಅವರು ಮುಖ್ಯಮಂತ್ರಿ ಹೇಳಿಕೆಯನ್ನು ಅವಮಾನಿಸಿದ್ದಾರೆ. ಕೂಡಲೇ ಅವರು ಕ್ಷಮೆಯಾಚಿಸಬೇಕು’ ಎಂದು ವಿಜಯಪುರ ಬಿಜೆಪಿ ಅಲ್ಪ ಸಂಖ್ಯಾತ ಘಟಕದ ಯುವ ಮುಖಂಡ ಯಾಸೀನ್‌ ಜವಳಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.