ADVERTISEMENT

ಸ್ನೇಹಿತೆಯ ಮದುವೆಗೆ ಹೋಗಿ ದುಬೈನಲ್ಲಿ ಸಿಲುಕಿದ ರಾಯರಡ್ಡಿ ಪುತ್ರಿ ಮಮತಾ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2026, 17:48 IST
Last Updated 1 ಮಾರ್ಚ್ 2026, 17:48 IST
<div class="paragraphs"><p>ಬಸವರಾಜ ರಾಯರಡ್ಡಿ ಅವರ ಪುತ್ರಿ ಮಮತಾ</p></div>

ಬಸವರಾಜ ರಾಯರಡ್ಡಿ ಅವರ ಪುತ್ರಿ ಮಮತಾ

   

ಕೊಪ್ಪಳ: ಸ್ನೇಹಿತೆಯ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ದುಬೈಗೆ ತೆರಳಿದ್ದ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅವರ ಪುತ್ರಿ ಮಮತಾ ಯುದ್ಧದ ಕಾರಣದಿಂದಾಗಿ ದುಬೈನಲ್ಲಿಯೇ ಉಳಿದುಕೊಳ್ಳುವಂತಾಗಿದೆ.   

ಮೂರು ದಿನಗಳ ಹಿಂದೆ ಅವರು ದುಬೈಗೆ ತೆರಳಿದ್ದರು. ವಾಪಸ್‌ ಬರಲು ವಿಮಾನ ಸೌಲಭ್ಯ ಲಭ್ಯವಾಗಿಲ್ಲ. ಮಮತಾ ಮೊದಲು ದುಬೈನಲ್ಲಿ ರೆಸಾರ್ಟ್‌ನಲ್ಲಿ ಉಳಿದುಕೊಂಡಿದ್ದರು. ಬಳಿಕ ರಾಯರಡ್ಡಿ ಅವರ ಸ್ನೇಹಿತರ ಮನೆಗೆ ತೆರಳಿದ್ದು ಅಲ್ಲಿ ಸುರಕ್ಷಿತವಾಗಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.

ADVERTISEMENT

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಬಸವರಾಜ ರಾಯರಡ್ಡಿ ‘ಮಗಳೊಂದಿಗೆ ಮಾತನಾಡಿದ್ದೇನೆ. ಮೊದಲು ರೆಸಾರ್ಟ್‌ನಲ್ಲಿ ಉಳಿದುಕೊಂಡಿದ್ದಳು ಬಳಿಕ ನನ್ನ ಸ್ನೇಹಿತನ ಮನೆಗೆ ಕಳುಹಿಸಿದ್ದೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.