ADVERTISEMENT

ಕೋವಿಡ್‌ ಸುರಕ್ಷತಾ ಕ್ರಮ: ವಿದ್ಯಾರ್ಥಿ ಭವನದಲ್ಲಿ ಗ್ರಾಹಕರ ನಡುವೆ ಗಾಜಿನ ತಡೆ

ಏಜೆನ್ಸೀಸ್
Published 6 ಜೂನ್ 2020, 10:37 IST
Last Updated 6 ಜೂನ್ 2020, 10:37 IST
ಮೇಜಿನ ಮೇಲೆ ಗಾಜಿನ ತಡೆ ಹಾಕುತ್ತಿರುವುದು
ಮೇಜಿನ ಮೇಲೆ ಗಾಜಿನ ತಡೆ ಹಾಕುತ್ತಿರುವುದು    

ಬೆಂಗಳೂರು: ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಜೂನ್‌ 8ರಿಂದ ರಾಜ್ಯದಲ್ಲಿ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳನ್ನು ತೆರೆಯಲು ಅವಕಾಶ ನೀಡಿರುವುದಾಗಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರು ಹೇಳಿರುವ ಬೆನ್ನಿಗೇ ರಾಜ್ಯದಲ್ಲಿ ಹೋಟೆಲ್‌ಗಳು ಬಾಗಿಲು ತೆರೆಯಲು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿವೆ.

ಹಲವು ಹೋಟೆಲ್‌ಗಳು ಶುಚಿ ಕಾರ್ಯದಲ್ಲಿ ತೊಡಗಿವೆ. ಗ್ರಾಹಕರ ನಡುವೆ ಅಂತರ ಕಾಪಾಡಲು ಬಗೆಬಗೆಯ ಕ್ರಮಗಳಿಗೆ ಮುಂದಾಗಿವೆ.
ಬೆಂಗಳೂರಿನ ಗಾಂಧಿ ಬಜಾರ್‌ನಲ್ಲಿರುವ ಹಳೇ ಹೋಟೆಲ್‌ ‘ವಿದ್ಯಾರ್ಥಿ ಭವನ’ ಹೋಟೆಲ್‌ನಲ್ಲೂ ಅಂತರ ಕಾಪಾಡುವ ಉದ್ದೇಶದಿಂದ ವಿಭಿನ್ನ ಮಾದರಿಯನ್ನು ಅನುಸರಿಸಲಾಗುತ್ತಿದೆ.

ಗಾಜಿನ ತಡೆಯ ಮೂಲಕ ಮೇಜುಗಳನ್ನು ಪ್ರತ್ಯೇಕಿಸಲಾಗುತ್ತಿದೆ. ಕೊರೊನಾ ವೈರಸ್‌ ಶ್ವಾಸದ ಮೂಲಕವೇ ಹೆಚ್ಚು ಹರಡುತ್ತದೆ. ಆದ್ದರಿಂದ ಹೋಟೆಲ್‌ ಗ್ರಾಹಕರ ನಡುವೆ ಗಾಜಿನ ತಡೆ ರಚಿಸುತ್ತಿದೆ.

ಇನ್ನು ಈ ಕುರಿತು ಮಾತನಾಡಿರುವ ಹೋಟೆಲ್‌ನ ಅರುಣ್‌ ಅಡಿಗ, ‘ಗ್ರಾಹಕರಲ್ಲಿ ನಾವು ಮೊದಲಿಗೆ ವಿಶ್ವಾಸ ತುಂಬುವ ಕೆಲಸ ಮಾಡಬೇಕಾಗಿದೆ. ಕೋವಿಡ್‌ ಎಂಬ ಸಾಂಕ್ರಾಮಿಕ ರೋಗವು ನಮಗೆ ಹೊಸ ಅನುಭವ ನೀಡಿದೆ. ಈಗ ಸಹಜ ಸ್ಥಿತಿಗೆ ಮರಳಬೇಕಿದೆ,’ ಎಂದು ಹೇಳಿದ್ದಾರೆ.

ವಿದ್ಯಾರ್ಥಿ ಭವನ ಬೆಂಗಳೂರಿನ ಹಳೇ ಹೋಟೆಲ್‌ಗಳಲ್ಲಿ ಒಂದು. ಬಸವನಗುಡಿಯ ಗಾಂಧಿ ಬಜಾರ್‌ನಲ್ಲಿರುವ ಈ ಹೋಟೆಲ್‌ಗೆ 2018ರಲ್ಲಿ 75 ವರ್ಷ ತುಂಬಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.