ADVERTISEMENT

ಎಂ.ಡಿ ಪರೀಕ್ಷೆ ಬರೆದ ಬಿಜೆಪಿ ಅಭ್ಯರ್ಥಿ ಡಾ.ಅವಿನಾಶ ಜಾಧವ

​ಪ್ರಜಾವಾಣಿ ವಾರ್ತೆ
Published 8 ಮೇ 2019, 19:01 IST
Last Updated 8 ಮೇ 2019, 19:01 IST
ಪರೀಕ್ಷೆ ಬಳಿಕ ಸಹಪಾಠಿಗಳೊಂದಿಗೆ ಚರ್ಚೆ ನಡೆಸಿದ ಡಾ.ಅವಿನಾಶ ಜಾಧವ (ಎಡದಿಂದ ಎರಡನೆಯವರು)
ಪರೀಕ್ಷೆ ಬಳಿಕ ಸಹಪಾಠಿಗಳೊಂದಿಗೆ ಚರ್ಚೆ ನಡೆಸಿದ ಡಾ.ಅವಿನಾಶ ಜಾಧವ (ಎಡದಿಂದ ಎರಡನೆಯವರು)   

ಕಲಬುರ್ಗಿ: ಚಿಂಚೋಳಿ ವಿಧಾನಸಭಾ ಕ್ಷೇತ್ರದಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಡಾ.ಅವಿನಾಶ ಜಾಧವ ಅವರು ಇಲ್ಲಿಯ ಮಹಾದೇವಪ್ಪ ರಾಂಪುರೆ ವೈದ್ಯಕೀಯ ಕಾಲೇಜಿನಲ್ಲಿ ಬುಧವಾರ ಸ್ನಾತಕೋತ್ತರ ವೈದ್ಯಕೀಯ (ಎಂ.ಡಿ) ಪರೀಕ್ಷೆಗೆ ಹಾಜರಾದರು.

ಒಟ್ಟು ನಾಲ್ಕು ಪತ್ರಿಕೆಗಳ ಪೈಕಿ ಮೊದಲ ದಿನದ ಮೆಡಿಸಿನ್ ಪತ್ರಿಕೆಯನ್ನು ಬರೆದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಚುನಾವಣೆಯ ಒತ್ತಡದ ನಡುವೆಯೂ ಪರೀಕ್ಷೆ ಬರೆದಿದ್ದೇನೆ. ಇನ್ನೂ ಮೂರು ಪತ್ರಿಕೆಗಳು ಬಾಕಿ ಇವೆ. ಆದರೆ, ನನಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಉಳಿದ ಮೂರು ಪತ್ರಿಕೆಗಳ ಪರೀಕ್ಷೆಯನ್ನು ಮುಂದಿನ ಬಾರಿ ಬರೆಯುತ್ತೇನೆ’ ಎಂದರು.

‘ಗುಲಬರ್ಗಾ’ ಲೋಕಸಭೆ ಚುನಾವಣೆ ಮತ್ತು ಚಿಂಚೋಳಿ ಉಪ ಚುನಾವಣೆ ಪ್ರಚಾರದಲ್ಲಿ ನಿರತನಾಗಿದ್ದರಿಂದ ಓದಲು ಸಾಧ್ಯವಾಗಿಲ್ಲ. ಅಭಿವೃದ್ಧಿ ವಿಚಾರಗಳನ್ನು ಇಟ್ಟುಕೊಂಡು ಮತ ಯಾಚಿಸುತ್ತಿದ್ದೇನೆ. ಉಪ ಚುನಾವಣೆಯಲ್ಲಿ ಕ್ಷೇತ್ರದ ಜನತೆ ನನ್ನ ಕೈಹಿಡಿಯುವ ವಿಶ್ವಾಸವಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.