ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಶೇ 50ಕ್ಕೂ ಹೆಚ್ಚು ಬಸ್‌ಗಳು ಮಂಗಳವಾರ ರಸ್ತೆಗೆ ಇಳಿದಿದ್ದವು.
ಸಾರಿಗೆ ನಿಗಮಗಳ ನೌಕರರ ಮುಷ್ಕರದ ಘೋಷಣೆಯ ನಂತರ ಬಿಎಂಟಿಸಿ ಮುಂಜಾಗ್ರತಾ ಕ್ರಮ ಕೈಗೊಡಿದ್ದರಿಂದ ನಗರ ಪ್ರಯಾಣಿಕರು ತುಸು ನಿರಾಳತೆ ಅನುಭವಿಸಿದರು.
ವಿದ್ಯುತ್ ಚಾಲಿತ ವಾಹನಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ರಸ್ತೆಗೆ ಇಳಿಸಲಾಗಿತ್ತು. ಹೊಸದಾಗಿ ನೇಮಕವಾಗಿ ತರಬೇತಿಯಲ್ಲಿರುವ ಚಾಲಕರು ಪೂರ್ಣ ಪ್ರಮಾಣದಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದರು. ಅವರನ್ನು ಅಗತ್ಯ ಮಾರ್ಗಗಳಲ್ಲಿ ನಿಯೋಜನೆ ಮಾಡಲಾಗಿತ್ತು.
ನಿವೃತ್ತಿ ಸಮೀಪದಲ್ಲಿರುವ, ಮುಷ್ಕರಕ್ಕೆ ಸಹಮತ ತೋರದ ಕೆಲ ಚಾಲಕರು, ನಿರ್ವಾಹಕರು ಕೆಲಸಕ್ಕೆ ಹಾಜರಾಗಿದ್ದರು.
ಕೆಲ ಮಾರ್ಗಗಳಲ್ಲಿ ಬಸ್ ಸಿಗದೇ ಶಾಲಾ ಕಾಲೇಜು ವಿದ್ಯಾರ್ಥಿಗಳು ಪರದಾಡಿದರು. ಮೆಟ್ರೊಗಳಲ್ಲಿ ಜನ ಸಂದಣಿ ಅಧಿಕವಾಗಿತ್ತು. ಬಹುತೇಕರು ಆಟೊರಿಕ್ಷಾ, ಕ್ಯಾಬ್ ಅವಲಂಬಿಸಿ, ಪ್ರಯಾಣಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.