ಮೈಸೂರಿನಲ್ಲಿ ಬಿ.ವೈ. ವಿಜಯೇಂದ್ರ ಬಣದ ಶಕ್ತಿ ಪ್ರದರ್ಶನ
ಮೈಸೂರು: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಬಣದ 38 ಮಾಜಿ ಸಚಿವ- ಶಾಸಕರ ತಂಡವು ಶನಿವಾರ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದು, ಶಕ್ತಿ ಪ್ರದರ್ಶನ ನಡೆಸಿತು.
ಮುಖಂಡರಾದ ಎಂ.ಪಿ. ರೇಣುಕಾಚಾರ್ಯ, ಬಿ.ಸಿ. ಪಾಟೀಲ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು , ವೈ. ಸಂಪಂಗಿ, ರೂಪಾಲಿ ನಾಯಕ, ಅಶೋಕ ಕಾಟವರ, ಹರ್ಷವರ್ಧನ್ , ವಿರೂಪಾಕ್ಷಪ್ಪ ಬಳ್ಳಾರಿ, ಗಂಗಾಧರ ನಾಯಕ್, ಗುಂಡಪ್ಪ ವಕೀಲ, ಸುನಿಲ್ ಹೆಗಡೆ, ಲಕ್ಷ್ಮಿನಾರಾಯಣ, ವೆಂಕಟಮುನಿಯಪ್ಪ, ಮಾಧವ ಮಲ್ಲಿಕಾರ್ಜುನ, ಸೋಮಶೇಖರ ರೆಡ್ಡಿ, ಶ್ರೀನಿವಾಸ ಸಜ್ಜನರ, ಶಿಡ್ಲಘಟ್ಟ ರಾಜಣ್ಣ, ಮುನಿಸ್ವಾಮಿ, ಬಸವರಾಜ ನಾಯಕ, ಸುರೇಶ ಮಾರಿಹಾಳ, ಎಸ್.ವಿ. ರಾಮಚಂದ್ರ, ನಿರಂಜನ, ಬೆಳ್ಳಿ ಪ್ರಕಾಶ, ಮಸಾಲ ಜಯರಾಂ, ತರೀಕೆರೆ ಸುರೇಶ, ಪರಣ್ಣ ಮುನವಳ್ಳಿ, ಎಲ್. ನಾಗೇಂದ್ರ, ಹರ್ಷವರ್ಧನ ಈ ತಂಡದಲ್ಲಿ ಇದ್ದಾರೆ.
ಈ ಸಂದರ್ಭದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ನಾಯಕರು, ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಹರಿಹಾಯ್ದರು. ಇದೇ ಪ್ರವೃತ್ತಿ ಮುಂದುವರಿಸಿದಲ್ಲಿ ರಾಜ್ಯದಾದ್ಯಂತ ಹೋರಾಟ ಸಂಘಟಿಸುವ ಎಚ್ಚರಿಕೆ ನೀಡಿದರು.
ಇದೇ ಸಂದರ್ಭ, ಯತ್ನಾಳರನ್ನು ಪಕ್ಷದಿಂದ ಉಚ್ಛಾಟಿಸುವಂತೆ ಕಾರ್ಯಕರ್ತರು ಘೋಷಣೆ ಕೂಗಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.