ADVERTISEMENT

ಅನಂತಕುಮಾರ್‌ ನಿಧನ: ಮಗನನ್ನೇ ಕಳೆದುಕೊಂಡಂತಾಗಿದೆ -ಶಿಕ್ಷಕಿ ಬೇಸರ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2018, 9:54 IST
Last Updated 12 ನವೆಂಬರ್ 2018, 9:54 IST
ಅನಂತಕುಮಾರ್ 7ನೇ ತರಗತಿ ಓದಿದ ಹುಬ್ಬಳ್ಳಿಯ ಬಾಸೆಲ್ ಮಿಷನ್‌ ಶಾಲೆ ಹಾಗೂ ಶಿಕ್ಷಕಿ ಪಿ.ಡಿ. ನಡುಗಡ್ಡಿ
ಅನಂತಕುಮಾರ್ 7ನೇ ತರಗತಿ ಓದಿದ ಹುಬ್ಬಳ್ಳಿಯ ಬಾಸೆಲ್ ಮಿಷನ್‌ ಶಾಲೆ ಹಾಗೂ ಶಿಕ್ಷಕಿ ಪಿ.ಡಿ. ನಡುಗಡ್ಡಿ   

ಹುಬ್ಬಳ್ಳಿ: ಬಾಲ್ಯದ ದಿನಗಳಲ್ಲಿ ಪಠ್ಯ ಚಟುವಟಿಕೆಗಳಲ್ಲಿ ‌ಅನಂತು ಸಕ್ರಿಯನಾಗಿದ್ದ. ಸದಾ ಚಟುವಟಿಕೆಯಿಂದ ಇರುತ್ತಿದ್ದ. ಕ್ರೀಡಾ‌ ಸ್ಪರ್ಧೆಗಳಲ್ಲಿ ಯಾವಾಗಲೂ‌ ಮೊದಲಿಗನಾಗಿರುತ್ತಿದ್ದ. ಸಣ್ಣ ವಯಸ್ಸಿಗೆ ನಮ್ಮನ್ನೆಲ್ಲ ಬಿಟ್ಟು ಹೋಗುತ್ತಾನೆಂದು ಅಂದುಕೊಂಡಿರಲಿಲ್ಲ. ಸ್ವಂತ ಮಗನನ್ನೇ ಕಳೆದುಕೊಂಡಷ್ಟು ದುಃಖವಾಗಿದೆ ಎಂದು ಕೆಂದ್ರ ಸಚಿವ ಅನಂತ್ ಕುಮಾರ್ ಅವರು ಕಲಿತ ಎಂಟಿಎಸ್ ಕಾಲೋನಿಯ ರೈಲ್ವೆ ಪ್ರಾಥಮಿಕ ಶಾಲೆಯ ಶಿಕ್ಷಕಿ ಪಿ.ಡಿ. ನಡುಗಡ್ಡಿ ಬೇಸರ ವ್ಯಕ್ತಪಡಿಸಿದರು.

ಮೂರು ವರ್ಷಗಳ ಹಿಂದೆ ಭೇಟಿಯಾಗಿದ್ದಾಗ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಎಂದು ನನಗೆ‌ ಹೇಳಿದ್ದ. ದಕ್ಷಿಣ ವಲಯದ ಯಾವುದೇ ಶಾಲಾ‌‌ ಕ್ರೀಡಾಕೂಟಗಳಿದ್ದರೂ ಅನಂತ್‌, ಪ್ರಹ್ಲಾದ (ಸಂಸದ ಪ್ರಹ್ಲಾದ ಜೋಶಿ) ಮುಂಚೂಣಿಯಲ್ಲಿ ಇರುತ್ತಿದ್ದರು. ಅನಂತು ತನ್ನ ಮಗಳ‌ ಮದುವೆಗೂ ಕರೆದಿದ್ದ ಎಂದು ನೆನಪುಗಳನ್ನು ಹಂಚಿಕೊಂಡರು.

ಇವನ್ನೂ ಓದಿ...

ADVERTISEMENT
ಅನಂತಕುಮಾರ್ ಹೈಸ್ಕೂಲ್ ಶಿಕ್ಷಣ ಕಲಿತ ಹುಬ್ಬಳ್ಳಿಯ ‌ಲ್ಯಾಮಿಂಗ್ಟನ್ ಶಾಲೆಯ ‌ನೋಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.