
ಪ್ರಜಾವಾಣಿ ವಾರ್ತೆ
ಬೆಂಗಳೂರು: ಆನ್‌ಲೈನ್‌ನಲ್ಲಿ ಔಷಧ ಮಾರಾಟಕ್ಕೆ ಅವಕಾಶ ನೀಡುವ ಕೇಂದ್ರ ಸರ್ಕಾರದ ಕ್ರಮ ವಿರೋಧಿಸಿ ಕರ್ನಾಟಕ ಔಷಧ ವ್ಯಾಪಾರಿಗಳ ಸಂಘ ಶುಕ್ರವಾರ ಬಂದ್‌ಗೆ ಕರೆ ನೀಡಿದ್ದು, ರಾಜ್ಯದ ಬಹುತೇಕ ಔಷಧ ಅಂಗಡಿಗಳು ತೆರೆಯುವುದಿಲ್ಲ.
‘ಆಸ್ಪತ್ರೆ ಆವರಣಗಳಲ್ಲಿರುವ ಔಷಧ ಅಂಗಡಿಗಳನ್ನು ಮಾತ್ರ ತೆರೆದಿರುತ್ತವೆ. ಬಂದ್‌ನಿಂದ ಹೊರಗುಳಿದಿರುವುದಾಗಿ
ಹೇಳುತ್ತಿರುವ ಸಂಸ್ಥೆಗಳು ಸಂಘದ ಸದಸ್ಯರಲ್ಲ’ ಎಂದು ಸಂಘದ ಉಪಾಧ್ಯಕ್ಷ ದೇವಿದಾಸ್ ಪ್ರಭು ಹೇಳಿದರು.
‘ಬಂದ್ ಮಾಡದೇ ಪ್ರತಿಭಟನೆ ಮಾಡುತ್ತೇವೆ’ ಎಂದು ಬೆಂಗಳೂರು ಕೆಮಿಸ್ಟ್ ಆ್ಯಂಡ್ ಡ್ರಗಿಸ್ಟ್ ಅಸೋಸಿಯೇಷನ್ ಹೇಳಿದೆ.
ಕೇಂದ್ರ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ದೇಶವ್ಯಾಪಿ ಪ್ರತಿಭಟನೆಗೆ ಔಷಧ ವ್ಯಾಪಾರಿಗಳ ಅಖಿಲ ಭಾರತ ಒಕ್ಕೂಟ ಕರೆ
ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.