ADVERTISEMENT

ಬಿಬಿಎಂಪಿ ಮೇಯರ್‌ ಚುನಾವಣೆಯಲ್ಲಿ ಬಣ್ಣದ ರಾಜಕೀಯ 

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2019, 10:58 IST
Last Updated 1 ಅಕ್ಟೋಬರ್ 2019, 10:58 IST
ಬಿಬಿಎಂಪಿಗೆ ಶಾಲು ತಂದ ಮೋಹನ್ ರಾಜ್
ಬಿಬಿಎಂಪಿಗೆ ಶಾಲು ತಂದ ಮೋಹನ್ ರಾಜ್   

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಮೇಯರ್‌ ಮತ್ತು ಉಪ ಮೇಯರ್‌ ಸ್ಥಾನಗಳಿಗೆ ಇಂದು ಚುನಾವಣೆ ನಡೆಯುತ್ತಿದ್ದು, ಬಿಜೆಪಿ ಮತ್ತು ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿಕೂಟದ ನಡುವೆ ಜಿದ್ದಾ ಜಿದ್ದಿ ಏರ್ಪಟ್ಟಿದೆ. ಅದೇ ಹೊತ್ತಲ್ಲೇ ಪಾಲಿಕೆ ಸಭಾಂಗಣದಲ್ಲಿ ಬಣ್ಣದ ರಾಜಕಾರಣವೂ ಕಾಣಿಸಿಕೊಂಡಿದೆ.

ಕಾಂಗ್ರೆಸ್‌ನ ಕಾರ್ಪೊರೇಟರ್‌ಗಳು ಕೇಸರು, ಬಿಳಿ, ಹಸಿರು ಬಣ್ಣಗಳುಳ್ಳ ತ್ರಿವರ್ಣದ ಶಾಲುಗಳನ್ನು ಹೊದ್ದು ಚುನಾವಣೆಗಾಗಿ ಪಾಲಿಕೆ ಸಭಾಂಗಣಕ್ಕೆ ಆಗಮಿಸಿದರು.

ಶಾಲಿನ ವಿಚಾರದಲ್ಲಿ ಕಾಂಗ್ರೆಸ್‌ ನಡೆಯನ್ನೇ ಅನುಸರಿಸಿದ ಬಿಜೆಪಿ ನಾಯಕರು ಕೂಡಲೇ ಕೇಸರಿ ಬಣ್ಣದ ಶಾಲುಗಳನ್ನು ಎರಡು ಚೀಲಗಳಲ್ಲಿ ತರಿಸಿ ತಮ್ಮೆಲ್ಲ ಕಾರ್ಪೊರೇಟರ್‌ಗಳಿಗೂ ಹಂಚಿದರು. ಸ್ವತಃಬಿಜೆಪಿಯ ಉಪಮೇಯರ್ ಅಭ್ಯರ್ಥಿ ರಾಮ್ ಮೋಹನ್ ರಾಜ್ ಅವರೇ ಕೇಸರಿ ಶಾಲುಗಳನ್ಗನು ಬಿಬಿಎಂಪಿ ಕೌನ್ಸಿಲ್ ಸಭಾಂಗಣಕ್ಕೆ ಹೊತ್ತು ತಂದರು.

ADVERTISEMENT

ಜೆಡಿಎಸ್‌ ಸದಸ್ಯರು ಹಸಿರು ಬಣ್ಣದ ಶಾಲು ಹೊದ್ದು ಬಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.