
ಎಐ ವಿಡಿಯೊದಲ್ಲಿನ ದೃಶ್ಯದ ಸ್ಕ್ರೀನ್ ಶಾಟ್
ಬೆಂಗಳೂರು: ಇತ್ತೀಚೆಗೆ ಟಾಕ್ಸಿಕ್ ಸಿನಿಮಾದ ವಿಡಿಯೊ ಮಾದರಿಯಲ್ಲಿ ಎಚ್.ಡಿ.ಕುಮಾರಸ್ವಾಮಿ ಮತ್ತೆ ರಾಜ್ಯ ರಾಜಕಾರಣಕ್ಕೆ ಬಂದು ಕಬ್ಜಾ ಮಾಡಿಕೊಳ್ಳಲು ಸಜ್ಜಾಗಿರುವಂತೆ ತೋರಿಸಲಾದ ಎಐ ಆಧರಿತ ವಿಡಿಯೊ ಹರಿದಾಡಿತ್ತು.
2028ರ ವಿಧಾನಸಭೆ ಚುನಾವಣೆ ಹೊತ್ತಿಗೆ ಎಚ್.ಡಿ. ಕುಮಾರಸ್ವಾಮಿಯವರು ರಾಜ್ಯ ರಾಜಕಾರಣಕ್ಕೆ ಹಿಂದಿರುಗುತ್ತಾರೆ ಎಂದು ತೋರಿಸಲಾಗಿತ್ತು.
ಈಗ ಅದೇ ವಿಡಿಯೊಗೆ ತಿರುಗೇಟು ನೀಡಿರುವ ಕಾಂಗ್ರೆಸ್, ‘ತಿರುಕನ ಕನಸು ಕಾಣುತ್ತಿರುವವರು ಯಾರು? 140 ಕ್ಷೇತ್ರ ಗೆದ್ದವರೋ, 18 ಕ್ಷೇತ್ರ ಗೆದ್ದವರೋ?’ ಎಂದು ಬರೆದುಕೊಂಡು ಎಐ ವಿಡಿಯೊವೊಂದನ್ನು ಹಂಚಿಕೊಂಡಿದೆ.
ಎಚ್‌ಡಿಕೆ ರಾಜ್ಯ ರಾಜಕಾರಣಕ್ಕೆ ಮತ್ತೆ ಬರುವುದು ಕನಸು, ನಿಜವಾಗಿರುವುದು ಬೇರೆಯೇ ಇದೆ ಎಂದು ಜೆಡಿಎಸ್ ಸದಸ್ಯರೊಬ್ಬರು ವೇದಿಕೆಯ ಮೇಲೆ ಮಾತನಾಡಿದ ವಿಡಿಯೊ ಹಂಚಿಕೊಂಡಿದೆ. ಇದರಲ್ಲಿ ‘ನಾನು ಈ ಪಕ್ಷವನ್ನು ಬಿಟ್ಟು ಹೋಗುತ್ತಿದ್ದೇನೆ. ಕುಮಾರಸ್ವಾಮಿಯವರೇ ಚುನಾವಣೆಗೆ ನಿಂತರೂ ಸೋಲುತ್ತಾರೆ’ ಎನ್ನುವ ದೃಶ್ಯವಿದೆ.
ಈ ಮೂಲಕ ಎಚ್‌ಡಿಕೆ ಮತ್ತೆ ರಾಜ್ಯರಾಜಕಾರಣಕ್ಕೆ ಬಂದರೂ ಸೋಲುತ್ತಾರೆ ಎಂದು ಕಾಂಗ್ರೆಸ್ ಟೀಕಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.