ADVERTISEMENT

ಅಕ್ಕನಿಗೆ ಕೋವಿಡ್‌–19 ದೃಢ: ತಂಗಿ ಮದುವೆ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 28 ಜೂನ್ 2020, 19:31 IST
Last Updated 28 ಜೂನ್ 2020, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹಾವೇರಿ: ಅಕ್ಕನಿಗೆ ಶನಿವಾರ ರಾತ್ರಿ ಕೋವಿಡ್‌–19 ಇರುವುದು ದೃಢಪಟ್ಟ ಕಾರಣ, ಭಾನುವಾರ ನಗರದಲ್ಲಿ ನಡೆಯಬೇಕಿದ್ದ ತಂಗಿ ಮದುವೆಯನ್ನು ಮುಂದೂಡಲಾಗಿದೆ.

‘ಕೋವಿಡ್‌–19 ಪತ್ತೆಯಾದ ಕಾರಣ ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದ 20 ಮಂದಿ ಕುಟುಂಬಸ್ಥರನ್ನು ಕ್ವಾರಂಟೈನ್‌ ಮಾಡಲಾಗಿದೆ. ಈ ಪೈಕಿ ಅವರ ತಂಗಿಯ ವಿವಾಹ ಭಾನುವಾರ ನಡೆಯಬೇಕಿತ್ತು. ಸೋಂಕು ಹಿನ್ನೆಲೆಯಲ್ಲಿ ಮದುವೆ ಮುಂದೂಡುವಂತೆ ಮನವಿ ಮಾಡಿದ ಮೇರೆಗೆ ಅವರ ಕುಟುಂಬಸ್ಥರು ಒಪ್ಪಿ ಮದುವೆ ಮುಂದೂಡಿದ್ದಾರೆ’ ಎಂದು ಡಿಎಚ್‌ಒ ರಾಜೇಂದ್ರ ದೊಡ್ಡಮನಿ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT