ADVERTISEMENT

ಬೆಳಗಾವಿ: ಸಂಪೂರ್ಣ ಸ್ತಬ್ಧ, ಸುತ್ತಾಡುತ್ತಿದ್ದವರಿಗೆ ಪೊಲೀಸರಿಂದ ಲಾಠಿ ರುಚಿ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2020, 11:46 IST
Last Updated 24 ಮಾರ್ಚ್ 2020, 11:46 IST
ಬೆಳಗಾವಿ ನಗರದಲ್ಲಿ ಅನಾವಶ್ಯಕವಾಗಿ ಸುತ್ತಾಡುತ್ತಿದ್ದ ದ್ವಿಚಕ್ರ ಸವಾರರ ಮೇಲೆ ಪೊಲೀಸರು ಲಾಠಿ ಚಾರ್ಚ್‌ ನಡೆಸಿದರು.
ಬೆಳಗಾವಿ ನಗರದಲ್ಲಿ ಅನಾವಶ್ಯಕವಾಗಿ ಸುತ್ತಾಡುತ್ತಿದ್ದ ದ್ವಿಚಕ್ರ ಸವಾರರ ಮೇಲೆ ಪೊಲೀಸರು ಲಾಠಿ ಚಾರ್ಚ್‌ ನಡೆಸಿದರು.    
""

ಬೆಳಗಾವಿ: ಕೊರೊನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರ ಘೋಷಿಸಿರುವ ಲಾಕ್‌ಡೌನ್‌ ನಿಮಿತ್ತ ಮಂಗಳವಾರ ಬೆಳಗಾವಿ ಸಂಪೂರ್ಣವಾಗಿ ಸ್ತಬ್ಧವಾಗಿದೆ.

ಜೀವನಾವಶ್ಯಕ ಸೇವೆಗಳನ್ನು ಹೊರತುಪಡಿಸಿ, ಇನ್ನುಳಿದ ಎಲ್ಲ ಅಂಗಡಿ– ಮುಂಗಟ್ಟುಗಳು ಬಂದ್‌ ಆಗಿವೆ. ಅನಾವಶ್ಯಕವಾಗಿ ಸುತ್ತಾಡುತ್ತಿದ್ದ ಕೆಲವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.

ಬಸ್‌ ನಿಲ್ದಾಣದ ಸುತ್ತಮುತ್ತ, ಖಡೇಬಜಾರ್‌, ಗಣಪತ್‌ ಗಲ್ಲಿ ಹಾಗೂ ರವಿವಾರ ಪೇಟೆ ಬಳಿ ಬೆಳಿಗ್ಗೆ ತೆರೆದಿದ್ದ ಕೆಲವು ಅಂಗಡಿಗಳನ್ನು ಪೊಲೀಸರು ಬಂದ್‌ ಮಾಡಿಸಿದರು. ಯುಗಾದಿ ಹಬ್ಬದ ನಿಮಿತ್ತ ಹೂವು, ಹಣ್ಣುಗಳನ್ನು ಖರೀದಿಸಲು ಜಮಾಯಿಸಿದ್ದ ಜನರು ಚದುರಿಸಿದರು.

ADVERTISEMENT

ಜೀವನಾವಶ್ಯಕ ವಸ್ತುಗಳಾದ ಹಾಲು, ದಿನಸಿ ಅಂಗಡಿಗಳು, ಪೆಟ್ರೋಲ್‌ ಬಂಕ್‌ಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ.
ಈಗಾಗಲೇ ಸರ್ಕಾರ ರಜೆ ಘೋಷಣೆ ಮಾಡಿದ್ದರಿಂದ ಶಾಲಾ– ಕಾಲೇಜುಗಳು ಬಂದ್‌ ಆಗಿದ್ದವು. ಖಾಸಗಿ ಕಂಪನಿಗಳು, ಅಂಗಡಿ– ಮುಂಗಟ್ಟುಗಳು ಬಾಗಿಲು ಹಾಕಿವೆ. ಮಾರುಕಟ್ಟೆ ಪ್ರದೇಶ ಬಿಕೋ ಎನ್ನುತ್ತಿತ್ತು.

ಲಾಕ್‌ಡೌನ್‌ ನಿಮಿತ್ತ ವಾಹನಗಳ ಸಂಚಾರವಿಲ್ಲದೆ ಬೆಳಗಾವಿ ಸಂಪೂರ್ಣಸ್ತಬ್ಧವಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.