ADVERTISEMENT

Covid-19 Karnataka Update | ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 44,077ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2020, 14:23 IST
Last Updated 14 ಜುಲೈ 2020, 14:23 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಜುಲೈ 13ರ ಸಂಜೆ 5 ಗಂಟೆಯಿಂದ ಜುಲೈ 14ರ ಸಂಜೆ 5 ಗಂಟೆವರೆಗೆ ರಾಜ್ಯದಲ್ಲಿ 2,496 ಹೊಸ ಕೋವಿಡ್‌ ಪ್ರಕರಣಗಳು ಪತ್ತೆಯಾಗಿದ್ದು, 87 ಜನರು ಮೃತಪಟ್ಟಿರುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಇದರೊಂದಿಗೆ ರಾಜ್ಯದಲ್ಲಿ 44,077 ಮಂದಿಗೆ ಸೋಂಕು ತಗುಲಿದ್ದು, ಇದುವರೆಗೂ 842 ಮಂದಿ ಮೃತಪಟ್ಟಿದ್ದಾರೆ.

ಈವರೆಗೆ 17,390 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 25,839 ಸಕ್ರಿಯ ಪ್ರಕರಣಗಳು ರಾಜ್ಯದಲ್ಲಿವೆ. ಇದರಲ್ಲಿ 540 ಜನರಿಗೆ ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. 1,142 ಜನರು ಇಂದು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ADVERTISEMENT

ಬೆಂಗಳೂರಿನಲ್ಲಿ ಒಂದೇ ದಿನ 1,267 ಜನರಿಗೆ ಸೋಂಕು ತಗುಲಿದ್ದು, 664 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟಾರೆ 4,992 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ದಿನದಿಂದ ದಿನಕ್ಕೆ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು, 21 ಸಾವಿರದತ್ತ ತಲುಪುತ್ತಿದೆ. ಒಂದೇ ದಿನ 56 ಜನರು ಬೆಂಗಳೂರಿನಲ್ಲೇ ಕೋವಿಡ್-19ನಿಂದ ನಿಧನರಾಗಿದ್ದಾರೆ.

ಇನ್ನುಳಿದಂತೆ ಮೈಸೂರಿನಲ್ಲಿ 125, ಕಲಬುರಗಿ 121, ಧಾರವಾಡ 100, ಬಳ್ಳಾರಿ 99, ಕೊಪ್ಪಳ 98, ದಕ್ಷಿಣ ಕನ್ನಡ 91, ಬಾಗಲಕೋಟೆ 78, ಉಡುಪಿ 73, ಉತ್ತರ ಕನ್ನಡ 64, ಬೆಳಗಾವಿ 64, ವಿಜಯಪುರ 52, ತುಮಕೂರು 47, ಬೀದರ್ 42, ಮಂಡ್ಯ 38, ರಾಯಚೂರು 25, ದಾವಣಗೆರೆ 17, ಬೆಂಗಳೂರು ಗ್ರಾಮಾಂತರ 14, ಚಿಕ್ಕಬಳ್ಳಾಪುರ 13, ಕೋಲಾರ 11, ಶಿವಮೊಗ್ಗ 10, ಗದಗ 9, ಚಾಮರಾಜನಗರ 8, ಹಾಸನ 4, ಚಿಕ್ಕಮಗಳೂರು 3, ಯಾದಗಿರಿ 2 ಮತ್ತು ರಾಮನಗರದಲ್ಲಿ ಓರ್ವ ವ್ಯಕ್ತಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ಪತ್ತೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.