
ಪ್ರಜಾವಾಣಿ ವಾರ್ತೆ
ಧರ್ಮಸ್ಥಳ
ಉಜಿರೆ (ದಕ್ಷಿಣ ಕನ್ನಡ): ಧರ್ಮಸ್ಥಳದಲ್ಲಿ ಮಂಜುನಾಥ ಸ್ವಾಮಿ ಲಕ್ಷದೀಪೋತ್ಸವ ಕಾರ್ಯ
ಕ್ರಮಗಳು ನ.15ರಿಂದ ಆರಂಭವಾಗಲಿದೆ. ನ.19ರಂದು ಲಕ್ಷದೀಪೋತ್ಸವ ನಡೆಯಲಿದೆ.
ನ.15ರಂದು ಹೊಸಕಟ್ಟೆ ಉತ್ಸವದೊಂದಿಗೆ ಲಕ್ಷದೀಪೋತ್ಸವ ಆರಂಭವಾಗಲಿದ್ದು, ಎಸ್‌ಡಿಎಂ ಪ್ರೌಢಶಾಲೆ ವಠಾರದಲ್ಲಿ ರಾಜ್ಯಮಟ್ಟದ ವಸ್ತುಪ್ರದರ್ಶನಕ್ಕೆ ಚಾಲನೆ ಸಿಗಲಿದೆ.
ನ.16ರಿಂದ ವಿವಿಧ ಉತ್ಸವಗಳು ಜರುಗಲಿವೆ. 18ರಂದು 93ನೇ ಸರ್ವಧರ್ಮ ಸಮ್ಮೇಳನ, 19ರಂದು 93ನೇ ಸಾಹಿತ್ಯ ಸಮ್ಮೇಳನ, 20ರಂದು ಸಂಜೆ 7ರಿಂದ ಭಗವಾನ್ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.