ADVERTISEMENT

ಅ‍ಪಘಾತವಾದ ಟ್ಯಾಂಕರ್‌ನಿಂದ ಡೀಸೆಲ್ ಸೋರಿಕೆ: ತುಂಬಿಕೊಳ್ಳಲು ನೂಕುನುಗ್ಗಲು

​ಪ್ರಜಾವಾಣಿ ವಾರ್ತೆ
Published 3 ಜೂನ್ 2019, 11:32 IST
Last Updated 3 ಜೂನ್ 2019, 11:32 IST
ಭಟ್ಕಳ ತಾಲ್ಲೂಕಿನ ಬೆಂಗ್ರೆಯಲ್ಲಿ ನಡೆದ ಅಪಘಾತದಲ್ಲಿ ಟ್ಯಾಂಕರ್‌ನಿಂದ ಸೋರುತ್ತಿದ್ದ ಡೀಸೆಲ್ ಸಂಗ್ರಹಿಸಲು ಜಮಾಯಿಸಿದ್ದ ಜನರು
ಭಟ್ಕಳ ತಾಲ್ಲೂಕಿನ ಬೆಂಗ್ರೆಯಲ್ಲಿ ನಡೆದ ಅಪಘಾತದಲ್ಲಿ ಟ್ಯಾಂಕರ್‌ನಿಂದ ಸೋರುತ್ತಿದ್ದ ಡೀಸೆಲ್ ಸಂಗ್ರಹಿಸಲು ಜಮಾಯಿಸಿದ್ದ ಜನರು   

ಭಟ್ಕಳ:ತಾಲ್ಲೂಕಿನ ಬೆಂಗ್ರೆ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಟಿಪ್ಪರ್ ಲಾರಿಯೊಂದುಡೀಸೆಲ್ ತುಂಬಿದ್ದ ಟ್ಯಾಂಕರ್‌ಗೆ ಸೋಮವಾರ ಡಿಕ್ಕಿಯಾಯಿತು. ಅದರಿಂದ ಸೋರುತ್ತಿದ್ದ ಡೀಸೆಲ್‌ ಅನ್ನು ಸ್ಥಳೀಯರು ಕ್ಯಾನ್‌ಗಳು, ಬಕೆಟ್‌ಗಳಲ್ಲಿ ತುಂಬಿಕೊಂಡು ಹೋದರು.

ಟ್ಯಾಂಕರ್‌ ಮಂಗಳೂರಿನಿಂದ ಶಿರಸಿಗೆ ತೆರಳುತ್ತಿತ್ತು. ಬೆಂಗ್ರೆಯಲ್ಲಿ ಮುಂದೆ ಸಾಗುತ್ತಿದ್ದ ಟ್ಯಾಂಕರ್‌ ಚಾಲಕ, ಹಂಪ್‌ ದಾಟಿಸಲು ತಕ್ಷಣ ಬ್ರೇಕ್ ಹಾಕಿದ. ಅದೇ ವೇಗದಲ್ಲಿ ಹಿಂದಿನಿಂದ ಬರುತ್ತಿದ್ದ ಟಿಪ್ಪರನ್ನು ಅದರಚಾಲಕ ನಿಯಂತ್ರಣ ಸಿಗದೇ ಟ್ಯಾಂಕರ್‌ ಡಿಕ್ಕಿ ಹೊಡೆಸಿದ.ಇದರಿಂದಟ್ಯಾಂಕರ್ ಒಡೆದು ಡೀಸೆಲ್ ಸೋರಿಕೆಯಾಯಿತು.

ಡೀಸೆಲ್ ತುಂಬಿಕೊಳ್ಳಲು ಮತ್ತಷ್ಟು ಜನ ಜಮಾಯಿಸಿ ನೂಕುನುಗ್ಗಲು ಉಂಟಾಯಿತು. ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಜನರನ್ನು ಚದುರಿಸಿ,ಡೀಸೆಲ್ ಸೋರಿಕೆಯನ್ನು ತಾತ್ಕಾಲಿಕವಾಗಿ ತಡೆದರು. ರಸ್ತೆಗೆ ಸಾಬೂನು ನೀರು ಚೆಲ್ಲಿ ಸ್ವಚ್ಛಗೊಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.