ADVERTISEMENT

ಕಾಂಗ್ರೆಸ್‌ನ ಸಾಮಾಜಿಕ ಮಾಧ್ಯಮ ಮುಖ್ಯಸ್ಥೆ ರಮ್ಯಾ ಟ್ವಿಟರ್‌ ಖಾತೆ ಡಿಲೀಟ್

ಹುದ್ದೆ ತೊರೆದರೇ ರಮ್ಯಾ?

​ಪ್ರಜಾವಾಣಿ ವಾರ್ತೆ
Published 2 ಜೂನ್ 2019, 6:09 IST
Last Updated 2 ಜೂನ್ 2019, 6:09 IST
   

ಬೆಂಗಳೂರು:ಕಾಂಗ್ರೆಸ್‌ನ ಸಾಮಾಜಿಕ ಜಾಲತಾಣ ಮುಖ್ಯಸ್ಥೆ ರಮ್ಯಾ ಟ್ವಿಟರ್ ಖಾತೆ ಡಿಲೀಟ್ ಆಗಿದೆ. ಇದರಿಂದ,ರಮ್ಯಾ ಆ ಹುದ್ದೆಯನ್ನುತೊರೆದಿದ್ದಾರೆಯೇ ಎಂಬ ಅನುಮಾನ ಮೂಡಿಸಿದೆ.

ರಮ್ಯಾ ಟ್ವೀಟ್‌ಗಳು ಡಿಲೀಟ್ ಆಗಿರುವುದು ಶನಿವಾರ ಬೆಳಕಿಗೆ ಬಂದಿತ್ತು. ಆಗ ಅವರ ಖಾತೆಯಲ್ಲಿ ‘ಕಾಂಗ್ರೆಸ್‌ಸಾಮಾಜಿಕ ಜಾಲತಾಣ ಮುಖ್ಯಸ್ಥೆ’ ಎಂಬ ಉಲ್ಲೇಖವೂ ಇರಲಿಲ್ಲ. ಅವರು ಹುದ್ದೆ ತೊರೆದಿದ್ದಾರೆಯೇ ಎಂದು ಪ್ರಶ್ನಿಸಿ ಎಎನ್‌ಐ ಸುದ್ದಿಸಂಸ್ಥೆ ಟ್ವೀಟ್ ಮಾಡಿತ್ತು.

ADVERTISEMENT

ಆದರೆ, ಹುದ್ದೆ ತೊರೆದಿರುವ ಕುರಿತ ವದಂತಿಗಳಿಗೆ ರಮ್ಯಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ವದಂತಿಗಳ ಕುರಿತು ಪ್ರಶ್ನಿಸಿದಾಗ, ‘ನಿಮ್ಮ ಮಾಹಿತಿಯ ಮೂಲ ತಪ್ಪಾಗಿದೆ’ ಎಂದು ಪ್ರತಿಕ್ರಿಯಿಸಿರುವುದಾಗಿಎಎನ್‌ಐಸುದ್ದಿಸಂಸ್ಥೆ ವರದಿ ಮಾಡಿದೆ.

ಕಾಂಗ್ರೆಸ್ ಜನಪ್ರತಿನಿಧಿಗಳು ಒಂದು ತಿಂಗಳವರೆಗೆ ಯಾವುದೇ ಸುದ್ದಿವಾಹಿನಿಗಳಲ್ಲಿ ಭಾಗವಹಿಸುವುದು ಬೇಡ ಎಂದು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರ ರಣದೀಪ್ ಸುರ್ಜೇವಾಲಾ ಕಳೆದ ಗುರುವಾರ (ಮೇ 30) ಹೇಳಿದ್ದರು. ಅದೇ ವೇಳೆ, ಕಾಂಗ್ರೆಸ್ ಪ್ರತಿನಿಧಿಗಳನ್ನು ಯಾವುದೇ ಕಾರ್ಯಕ್ರಮಗಳಿಗೆ ಆಹ್ವಾನಿಸಬೇಡಿ ಎಂದು ಅವರು ಸುದ್ದಿಮಾಧ್ಯಮಗಳಿಗೆ ಮನವಿ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.