ADVERTISEMENT

ನಾನೂ ಕಾಂಗ್ರೆಸ್ ಕಾರ್ಯಕರ್ತ ಎಂದ ಸಿದ್ದರಾಮಯ್ಯ ಕಾರ್ ಮೇಲೆ ಮೊಟ್ಟೆ ಹೊಡೆದ ಆರೋಪಿ

ವಿಡಿಯೊ ವೈರಲ್

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2022, 11:01 IST
Last Updated 20 ಆಗಸ್ಟ್ 2022, 11:01 IST
ಸಂಪತ್
ಸಂಪತ್   

ಮಡಿಕೇರಿ: ‘ನಾನೂಈಗ ಕಾಂಗ್ರೆಸ್ ಕಾರ್ಯಕರ್ತ. ಸಿದ್ದರಾಮಯ್ಯ ಅವರ ಹಿಂದೂ ವಿರೋಧಿ ಹೇಳಿಕೆಗೆ ಬೇಸತ್ತು ಅವರುಪ್ರಯಾಣಿಸುತ್ತಿದ್ದ ಕಾರಿಗೆ ಮೊಟ್ಟೆ ಹೊಡೆದೆ’ ಎಂದು ಸೋಮವಾರಪೇಟೆಯ ಸಂಪತ್ ಎಂಬುವವರು ಹೇಳಿರುವ ವಿಡಿಯೊ ವೈರಲ್ ಆಗಿದೆ.

ಆದರೆ ಈ ವಿಡಿಯೊ ಚಿತ್ರೀಕರಿಸಿದವರು ಯಾರು? ಪ್ರಶ್ನೆ ಕೇಳುತ್ತಿದ್ದವರು ಯಾರು ? ಎಂಬುದು ಗೊತ್ತಾಗಿಲ್ಲ.

‘ಕೊಡಗಿನವರು ದನದ ಮಾಂಸ ತಿನ್ನುತ್ತಾರೆ ಎಂದು ಸಿದ್ದರಾಮಯ್ಯ ನೀಡಿದ್ದ ಹೇಳಿಕೆಯಿಂದ ಕೋಪಗೊಂಡಿದ್ದೆ. ಕೆಲಸದ ನಿಮಿತ್ತ ಬಂದಿದ್ದ ನಾನು ಪ್ರತಿಭಟನೆಯ ಗುಂಪಿನಲ್ಲಿ ಸೇರಿ ಸಿದ್ದರಾಮಯ್ಯ ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಮೊಟ್ಟೆ ಹೊಡೆದೆ’ ಎಂದು ಅವರು ಹೇಳಿದ್ದಾರೆ.

ADVERTISEMENT

‘ನಾನು ಜೀವಿಜಯ ಅವರ ಹಿಂಬಾಲಕ. ಅವರು ಜೆಡಿಎಸ್‌ನಲ್ಲಿದ್ದಾಗ ಮೊದಲು ನಾನೂ ಅಲ್ಲೇ ಇದ್ದೆ. ಅವರು ಕಾಂಗ್ರೆಸ್‌ಗೆ ಬಂದಾಗ ನಾನೂ ಅವರೊಂದಿಗೆ ಬಂದೆ. ಸಿದ್ದರಾಮಯ್ಯ ಅವರು ಟಿಪ್ಪು ಕುರಿತು ನೀಡಿದ ಹೇಳಿಕೆಯಿಂದ ನನಗೆ ಬೇಸರವಾಗಿತ್ತು’ ಎಂದು ಅವರು ವಿಡಿಯೊದಲ್ಲಿ ತಿಳಿಸಿದ್ದಾರೆ.

‘ನಾನು ಮೊದಲು ಹಿಂದೂ ನಂತರ ಪಕ್ಷ. ಹಿಂದೂ ಕಾರ್ಯಕ್ರಮವೊಂದರಲ್ಲಿ ಶಾಸಕ ಅಪ್ಪಚ್ಚುರಂಜನ್ ಅವರೊಂದಿಗೆ ಫೋಟೊ ತೆಗೆಸಿಕೊಂಡಿದ್ದೆ. ಅಂದು ಪ್ರತಿಭಟನೆ ಮಾಡಲು ಬಂದಿರಲಿಲ್ಲ. ಕೆಲಸದ ನಿಮಿತ್ತ ಬಂದಿದ್ದ ನಾನು ಸಿದ್ದರಾಮಯ್ಯ ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಮೊಟ್ಟೆ ಹೊಡೆದೆ’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.