ADVERTISEMENT

ಎಂಜಿನಿಯರಿಂಗ್‌: ಸೀಟು ಹೆಚ್ಚಳಕ್ಕೆ ಉನ್ನತ ಶಿಕ್ಷಣ ಇಲಾಖೆಯಿಂದ ಸಿಗದ ಸಮ್ಮತಿ

​ಪ್ರಜಾವಾಣಿ ವಾರ್ತೆ
Published 28 ಜೂನ್ 2025, 15:36 IST
Last Updated 28 ಜೂನ್ 2025, 15:36 IST
   

ಬೆಂಗಳೂರು: ಎಂಜಿನಿಯರಿಂಗ್‌ ಸೀಟ್‌ ಬ್ಲಾಕಿಂಗ್‌ ಪ್ರಕರಣದಲ್ಲಿ ಹೆಸರಿರುವ ಎರಡು ಕಾಲೇಜುಗಳು ಸಲ್ಲಿಸಿದ್ದ ಹೆಚ್ಚುವರಿ ಸೀಟುಗಳ ಬೇಡಿಕೆಗೆ ಉನ್ನತ ಶಿಕ್ಷಣ ಇಲಾಖೆ ಅನುಮೋದನೆ ನೀಡಿಲ್ಲ.

ಬೇಡಿಕೆ ಇರುವ ಕಂಪ್ಯೂಟರ್‌ ಸೈನ್ಸ್‌, ಕೃತಕ ಬುದ್ಧಿಮತ್ತೆ ಮತ್ತಿತರ ಕೋರ್ಸ್‌ಗಳಲ್ಲಿ 2025-26ನೇ ಸಾಲಿಗೆ ಸೀಟು ಹೆಚ್ಚಳ ಮಾಡಲು ಕೋರಿ ಬಿಎಂಎಸ್ ಎಂಜಿನಿಯರಿಂಗ್‌ ಕಾಲೇಜು, ನ್ಯೂ ಹೊರೈಜನ್‌ ಎಂಜಿನಿಯರಿಂಗ್‌ ಕಾಲೇಜುಗಳ ಆಡಳಿತ ಮಂಡಳಿ ಪ್ರಸ್ತಾವ ಸಲ್ಲಿಸಿದ್ದವು. 

ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಸೀಟು ಹೆಚ್ಚಳಕ್ಕೆ ಅನುಮೋದನೆ ನೀಡಿದ್ದರೂ, ರಾಜ್ಯ ಸರ್ಕಾರ  ನಿರಾಕ್ಷೇಪಣಾ ಪ್ರಮಾಣಪತ್ರ (ಎನ್‌ಒಸಿ) ನೀಡಿಲ್ಲ. ಬಿಎಂಎಸ್ ಕಾಲೇಜು ಕಂಪ್ಯೂಟರ್‌ ಸೈನ್ಸ್‌ ವಿಭಾಗದಲ್ಲಿ 120, ನ್ಯೂ ಹೊರೈಜನ್‌ ಕಾಲೇಜು ಕೃತಕ ಬುದ್ಧಿಮತ್ತೆಯಲ್ಲಿ 240 ಹಾಗೂ ಕಂಪ್ಯೂಟರ್‌ ಸೈನ್ಸ್‌ನಲ್ಲಿ 660 ಸೀಟುಗಳನ್ನು ಹೆಚ್ಚಿಸಲು ಅರ್ಜಿ ಸಲ್ಲಿಸಿವೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.