ADVERTISEMENT

ಭಾಗ್ಯನಗರ: ಕೂದಲು ಉದ್ಯಮಕ್ಕೆ ಭಾರಿ ಹೊಡೆತ, ರಫ್ತು ನೀತಿಯಿಂದ ತೊಂದರೆ

300ರಷ್ಟಿದ್ದ ಸಂಸ್ಕರಣಾ ಘಟಕ 4ಕ್ಕೆ * ₹250 ಕೋಟಿ ಇದ್ದ ವಹಿವಾಟು ಇಳಿಕೆ

ಸಿದ್ದನಗೌಡ ಪಾಟೀಲ
Published 3 ಸೆಪ್ಟೆಂಬರ್ 2019, 8:42 IST
Last Updated 3 ಸೆಪ್ಟೆಂಬರ್ 2019, 8:42 IST
ಕೊಪ್ಪಳದ ಭಾಗ್ಯನಗರದ ಶ್ರೀನಿವಾಸ ಹೇರ್‌ ಇಂಡಸ್ಟ್ರೀಸ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರು
ಕೊಪ್ಪಳದ ಭಾಗ್ಯನಗರದ ಶ್ರೀನಿವಾಸ ಹೇರ್‌ ಇಂಡಸ್ಟ್ರೀಸ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರು   

ಕೊಪ್ಪಳ: ಸಮೀಪದ ಭಾಗ್ಯನಗರದಲ್ಲಿ ಕೂದಲು ಸಂಸ್ಕರಿಸುವ 300 ಸಂಸ್ಕರಣಾ ಘಟಕಗಳು ಸರ್ಕಾರದ ರಫ್ತು ನೀತಿಯಿಂದಸಂಕಷ್ಟಕ್ಕೆ ಸಿಲುಕಿ ಮುಚ್ಚಿದ್ದು, ಸದ್ಯ 4 ಘಟಕಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ.

ಭಾಗ್ಯನಗರದಲ್ಲಿ ಸಂಸ್ಕರಣೆಯಾಗುವ ಕೂದಲಿಗೆ ದೇಶ, ವಿದೇಶಗಳಲ್ಲಿಯೂ ಬೇಡಿಕೆ ಇದೆ. ವಾರ್ಷಿಕ ₹250 ಕೋಟಿಯಷ್ಟಿದ್ದ ವಹಿವಾಟು ಈಗ ಗಣನೀಯವಾಗಿ ಕುಸಿದಿದೆ. ಹಿಂದೆ 25 ಸಾವಿರ ಜನ ಉದ್ಯೋಗ ಮಾಡುತ್ತಿದ್ದರು. ಈಗ ಕೆಲಸಗಾರರ ಸಂಖ್ಯೆ ಸಾವಿರಕ್ಕೆ ಇಳಿಕೆಯಾಗಿದೆ.

ಉದ್ಯಮ ಸ್ನೇಹಿ ನೀತಿ ಇಲ್ಲದಿರುವುದು ಒಂದೆಡೆಯಾದರೆ, ಆರಂಭದಲ್ಲಿ ಇದಕ್ಕೆ ಶೇಕಡ 28ರಷ್ಟು ಜಿಎಸ್‌ಟಿ ವಿಧಿಸಲಾಗಿತ್ತು. ಬಹುಪಾಲು ಸಂಸ್ಕರಣಾ ಘಟಕಗಳು ಮುಚ್ಚಲು ಇದು ಕಾರಣವಾಯಿತು. ಕೆಲ ತಿಂಗಳ ಹಿಂದಷ್ಟೇ ಇದನ್ನು ಜಿಎಸ್‌ಟಿಯಿಂದ ಮುಕ್ತಗೊಳಿಸಲಾಗಿದೆ.

ADVERTISEMENT

ಕಾರಣ ಏನು?:20 ವರ್ಷಗಳ ಹಿಂದೆ ಆರಂಭವಾಗಿದ್ದ ಈ ಉದ್ಯಮ ಜಿಲ್ಲೆಯ ಅನೇಕ ನಗರ, ಹಳ್ಳಿಗಳ ಆರ್ಥಿ
ಕತೆಯನ್ನೇಬದಲಿಸಿತ್ತು. ಸಂಸ್ಕರಣಾ ಘಟಕ ಸ್ಥಾಪನೆಗೆ ಇಲ್ಲಿನವರು ಹಿಂಜರಿದಿದ್ದರಿಂದಆಂಧ್ರಪ್ರದೇಶ ಮೂಲದ ಉದ್ಯಮಿಗಳು ಸಂಸ್ಕರಣಾ ಘಟಕ ಆರಂಭಿಸಿ ಸಾವಿರಾರು ಜನರಿಗೆ ಉದ್ಯೋಗ ನೀಡಿದ್ದರು. ಆ ನಂತರ ಇಲ್ಲಿ 300ಕ್ಕೂ ಹೆಚ್ಚು ಘಟಕಗಳು ಕಾರ್ಯಾರಂಭ ಮಾಡಿದ್ದವು.ಮನೆ, ಮನೆಗೆ ಕಚ್ಚಾ ಸಾಮಗ್ರಿಗಳನ್ನು ಒದಗಿಸಿ ಕೂದಲು ಹಿಂಜಿ ಸಂಸ್ಕರಣಾ ಘಟಕಕ್ಕೆ ನೀಡಿದರೆ ಕೆ.ಜಿಗೆ ₹4 ಸಾವಿರದಷ್ಟು ಆದಾಯ ಬರುತ್ತಿತ್ತು.

ಸಾರಿಗೆ, ತೆರಿಗೆ ವಿಷಯದಲ್ಲಿಯ ಸಮಸ್ಯೆ ಮತ್ತು ಕೌಶಲ ಕೊರತೆಯಿಂದಾಗಿ ನಲುಗಿ ಒಂದೊಂದೇ ಸಂಸ್ಕರಣಾ ಘಟಕಗಳು ಮುಚ್ಚುತ್ತಾ ಹೋದವು. ಕೂದಲು ಆಯುವ ಉದ್ಯೋಗ ಮಾಡುವವರು ಸಹ ಈ ಘಟಕಗಳಿಗೆ ಕೂದಲು ನೀಡದೇ ಮಧ್ಯವರ್ತಿಗಳ ಮೂಲಕ ಬರ್ಮಾ, ಚೀನಾ ದೇಶಕ್ಕೆ ಕಳುಹಿಸುತ್ತಿದ್ದಾರೆ. ಹೀಗಾಗಿ ಕಚ್ಚಾ ಸಾಮಗ್ರಿ ಕೊರತೆಯೂ ಎದುರಾಗಿದೆ.

‘ಆಧುನಿಕ ಕೌಶಲದ ಕೊರತೆ, ಕೂದಲು ಉದ್ಯಮದ ಬಗ್ಗೆ ಕೀಳರಿಮೆ, ಸರ್ಕಾರದ ಉದ್ಯಮ ವಿರೋಧಿ ನೀತಿಯಿಂದ ಈ ಸಂಕಷ್ಟ ಎದುರಾಗಿದೆ. ಅಕ್ರಮ ರಫ್ತು ತಡೆಗಟ್ಟಿವಿಗ್‌ ತಯಾರಿಕೆ ಘಟಕಗಳನ್ನು ಇಲ್ಲಿಯೇ ಆರಂಭಿಸಿದೆ ಮಾತ್ರ ಈ ಉದ್ಯಮ ಜೀವ ಉಳಿಸಿಕೊಳ್ಳಬಹುದು' ಎನ್ನುತ್ತಾರೆ ಕೂದಲು ಉದ್ಯಮಿಹಾಗೂ ಜಿಲ್ಲಾವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಶ್ರೀನಿವಾಸ ಗುಪ್ತ.

ಸಂಸ್ಕರಣೆ ಹೇಗೆ?

ಮನೆ, ಮನೆಗಳಿಂದ ಕೂದಲು ಆಯ್ದುಕೊಡುವ ಜನರಿಂದ ಮತ್ತು ತಿರುಪತಿ ದೇವಸ್ಥಾನದಿಂದ ಆಮದು ಮಾಡಿಕೊಂಡುನೂರಾರು ಕಾರ್ಮಿಕರು ಹಿಂಜಿ, ಬಾಚಣಿಕೆ ಮೂಲಕ ಒಪ್ಪ ಓರಣವಾಗಿ ಕೂದಲು ಗುಚ್ಚಗಳನ್ನು ತಯಾರಿಸುತ್ತಾರೆ.ಅವುಗಳು ಬರ್ಮಾ ಮೂಲಕ ಚೀನಾಕ್ಕೆ ರಫ್ತಾಗುತ್ತವೆ. ಚೀನಾದವರು ವಿಗ್‌ ತಯಾರಿಸಿ ಮಾರಾಟ ಮಾಡುತ್ತಾರೆ.

***

ಸಾವಿರಾರು ಕೋಟಿ ಆದಾಯ ತರುವ ಈ ಉದ್ಯಮದ ಬಗ್ಗೆ ಸರ್ಕಾರ ಗಮನಹರಿಸುತ್ತಿಲ್ಲ. ಇಲ್ಲಿನ ಕೆಲಗಾರರು ಚಹಾ ಅಂಗಡಿಗಳಲ್ಲಿ ಲೋಟ ತೊಳೆಯುವ ಕೆಲಸಕ್ಕೆ ಹೊರಟಿದ್ದಾರೆ

ಶ್ರೀನಿವಾಸ ಗುಪ್ತ, ಅಧ್ಯಕ್ಷ, ಜಿಲ್ಲಾ ವಾಣಿಜ್ಯೋಮ ಸಂಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.