ADVERTISEMENT

ಗೋಕರ್ಣ: ಗುಡ್ಡದ ಗುಹೆಯಲ್ಲಿ ವಿದೇಶಿಯರ ವಾಸ್ತವ್ಯ!

ಗೋಕರ್ಣದ ಬಲ್ಲಾಳ ತೀರ್ಥದ ದುರ್ಗಮ ಪ್ರದೇಶದಲ್ಲಿ ಹಲವು ದಿನಗಳಿಂದ ಜೀವನ

ರವಿ ಸೂರಿ
Published 5 ಮೇ 2020, 1:48 IST
Last Updated 5 ಮೇ 2020, 1:48 IST
ಗೋಕರ್ಣ ಮತ್ತು ಕುಡ್ಲೆ ಬೀಚ್ ಮಧ್ಯದಲ್ಲಿರುವ ಜಟಾಯು ತೀರ್ಥದ ಪಕ್ಕದ ಬಲ್ಲಾಳ ತೀರ್ಥದ ದುರ್ಗಮ ಪ್ರದೇಶದಲ್ಲಿ ಗುಹೆಯೊಂದರಲ್ಲಿ ನೆಲೆಸಿರುವ ವಿದೇಶಿ ಪ್ರವಾಸಿಗ.  
ಗೋಕರ್ಣ ಮತ್ತು ಕುಡ್ಲೆ ಬೀಚ್ ಮಧ್ಯದಲ್ಲಿರುವ ಜಟಾಯು ತೀರ್ಥದ ಪಕ್ಕದ ಬಲ್ಲಾಳ ತೀರ್ಥದ ದುರ್ಗಮ ಪ್ರದೇಶದಲ್ಲಿ ಗುಹೆಯೊಂದರಲ್ಲಿ ನೆಲೆಸಿರುವ ವಿದೇಶಿ ಪ್ರವಾಸಿಗ.     

ಗೋಕರ್ಣ: ಇಲ್ಲಿಗೆ ಬಂದ ವಿದೇಶಿ ಪ್ರವಾಸಿಗರಲ್ಲಿ ಹಲವರು ಸಮುದ್ರದ ಅಂಚಿನಲ್ಲಿ ಗುಡ್ಡದ ತಪ್ಪಲಿನ ದುರ್ಗಮ ಪ್ರದೇಶದಲ್ಲಿ ವಾಸ ಮಾಡುತ್ತಿದ್ದಾರೆ. ಅವರು ಆಡಳಿತದ, ಪೊಲೀಸರಅನುಮತಿ ಪಡೆಯದಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

ಮೇನ್ ಬೀಚ್ ಮತ್ತು ಕುಡ್ಲೆ ಬೀಚ್ ಮಧ್ಯದಲ್ಲಿರುವ ಜಟಾಯು ತೀರ್ಥದ ಪಕ್ಕದ ಬಲ್ಲಾಳ ತೀರ್ಥದ ದುರ್ಗಮ ಪ್ರದೇಶದ ಗುಹೆಯಲ್ಲಿ ವಿದೇಶಿ ಪ್ರಜೆಗಳಿದ್ದಾರೆ. ಗುಹೆಯಲ್ಲಿ ಒಬ್ಬ ಹಾಗೂ ಪಕ್ಕದಲ್ಲಿ ಮತ್ತೊಬ್ಬ ಟೆಂಟ್ ಹಾಕಿಕೊಂಡು ಹಲವು ದಿನಗಳಿಂದ ವಾಸ ಮಾಡುತ್ತಿರುವುದು ಕಂಡು ಬಂದಿದೆ.

ಲಾಕ್‌ಡೌನ್ ಆದ ಕಾರಣ ಸ್ಥಳೀಯ ಕೆಲವು ಯುವಕರು ಗುಡ್ಡದ ತಪ್ಪಲಿನಲ್ಲಿರುವ ಐತಿಹಾಸಿಕ, ಪುರಾಣೋಕ್ತ ಸ್ಥಳಗಳ ವೀಕ್ಷಣೆಗೆ ತೆರಳಿದ್ದಾಗ ಇವರು ಕಂಡು ಬಂದಿದ್ದಾರೆ. ಈ ವಿದೇಶಿಯರುಅಲ್ಲಿಯೇ ಅಡುಗೆ ಮಾಡಿಕೊಂಡಿದ್ದು, ಸಾಮಗ್ರಿ ಖರೀದಿಸಲು ಮಾತ್ರಗೋಕರ್ಣಕ್ಕೆಬರುತ್ತಾರೆ. ಉಳಿದ ಎಲ್ಲ ಸಮಯವನ್ನೂ ಗುಹೆ ಮತ್ತು ಅದರ ಸಮೀಪದಲ್ಲೇ ಕಳೆಯುತ್ತಿದ್ದಾರೆ.

ADVERTISEMENT

ಇನ್ನೂ ಕೆಲವರು ರಾಮತೀರ್ಥದ ಹಿಂದೆಇರುವ ಸಮುದ್ರದ ಅಂಚಿನ ಬೆಟ್ಟದ ತಪ್ಪಲಿನಲ್ಲಿ ನೆಲೆಸಿದ್ದಾರೆ. ರಾತ್ರಿಯಾಗುತ್ತಿದ್ದಂತೆ ಹಲವು ರೀತಿಯಯಜ್ಞ ಮಾಡುತ್ತಾ ಉಳಿದ ವಿದೇಶಿಗರನ್ನು ಆಕರ್ಷಿಸುತ್ತಿದ್ದಾರೆ. ಕೆಲವೊಮ್ಮೆಗ್ರಾಮಸ್ಥರುಸ್ಥಳಕ್ಕೆ ಹೋದಾಗ ಗದರಿಸಿ, ಬೆದರಿಸಿ ಕಳುಹಿಸಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.

ಅಪಾಯಕಾರಿ ವಾಸ:ವಿದೇಶಿಗರ ಸುರಕ್ಷತೆಯ ದೃಷ್ಟಿಯಿಂದ ಈ ರೀತಿ ಗುಹೆಯಲ್ಲಿ ಯಾರಿಗೂ ತಿಳಿಯದಂತೆ ವಾಸ ಮಾಡುವುದು ಅಪಾಯಕಾರಿ. ಇದು ಪೊಲೀಸರ ಗಮನಕ್ಕೂಬಾರದಿರುವುದುಅಚ್ಚರಿ ಮೂಡಿಸಿದೆ ಎಂದು ಸ್ಥಳೀಯ ಯುವಕರೊಬ್ಬರು ಹೇಳುತ್ತಾರೆ.

ಒಂದು ವೇಳೆ ವಿದೇಶಿಯರಿಗೆ ಏನಾದರೂ ಸಂಭವಿಸಿದರೆ ಅವರನ್ನು ಬದುಕಿಸಲೂ ತುಂಬಾ ಪ್ರಯಾಸ ಪಡಬೇಕಾದ ಪರಿಸ್ಥಿತಿ ಇದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ವಿದೇಶಿಯರನ್ನು ಅಲ್ಲಿಂದ ತೆರವುಗೊಳಿಸಿ ಸುರಕ್ಷಿತ ತಾಣಕ್ಕೆ ಕಳುಹಿಸಬೇಕು ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.