
ಫಾಕ್ಸ್‌ಕಾನ್
ಬೆಂಗಳೂರು: ಬೆಂಗಳೂರು ಸಮೀಪದ ದೇವನಹಳ್ಳಿಯಲ್ಲಿ ಫಾಕ್ಸ್‌ಕಾನ್‌ನ ಐಫೋನ್ ತಯಾರಿಕಾ ಘಟಕ ಆರಂಭದ ಶ್ರೇಯಕ್ಕಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನಡೆಯುತ್ತಿರುವ ಜಗಳ ಶನಿವಾರವೂ ಮುಂದುವರೆದಿದೆ.
ಕರ್ನಾಟಕದಲ್ಲಿನ ಫಾಕ್ಸ್‌ಕಾನ್ ಘಟಕ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಗುರುವಾರ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದರು. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ‘ಕೊನೆಗೂ ಕೇಂದ್ರ ಸರ್ಕಾರದ ಸಾಧನೆ ಗುರುತಿಸಿದಿರಲ್ಲ’ ಎಂದು ಪ್ರತಿಕ್ರಿಯಿಸಿದ್ದರು.
ಅಶ್ವಿನಿ ವೈಷ್ಣವ್ ಅವರ ಪ್ರತಿಪಾದನೆ ಅಲ್ಲಗೆಳೆದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಪೋಸ್ಟ್ ಮಾಡಿದ್ದರು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಫಾಕ್ಸ್‌ಕಾನ್ ಘಟಕ ಆರಂಭದ ಒಪ್ಪಂದಕ್ಕೆ ಸಹಿ ಹಾಕಿದ್ದು ನನ್ನ ಅವಧಿಯಲ್ಲಿ’ ಎಂದು ತಿವಿದಿದ್ದರು. ಈಗ ಬಿಜೆಪಿ ಮತ್ತು ಕಾಂಗ್ರೆಸ್‌ನ ರಾಜ್ಯ ನಾಯಕರು ಶ್ರೇಯಕ್ಕಾಗಿನ ಈ ಜಗಳ ಮುಂದುವರೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.