ಹುಬ್ಬಳ್ಳಿ: ನೈರುತ್ಯ ರೈಲ್ವೆ ವಲಯದ ಬೆಂಗಳೂರು, ಮೈಸೂರು ಮತ್ತು ಹುಬ್ಬಳ್ಳಿ ವಿಭಾಗ ವ್ಯಾಪ್ತಿಯಲ್ಲಿ ಈ ವರ್ಷದ ಒಂಬತ್ತು ತಿಂಗಳಲ್ಲಿ ಅಂದಾಜು ₹5.51 ಕೋಟಿ ಮೌಲ್ಯದ 691 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ. ಇದರಲ್ಲಿ ₹4.59 ಕೋಟಿ ಮೌಲ್ಯದ ಗಾಂಜಾವನ್ನು ರಾಜಧಾನಿ ಬೆಂಗಳೂರು ಹಾಗೂ ಸುತ್ತಮುತ್ತ ಜಪ್ತಿ ಮಾಡಲಾಗಿದೆ.
ಜನವರಿಯಿಂದ ಸೆಪ್ಟೆಂಬರ್ 20ರವರೆಗೆ ನಡೆದ ದಾಳಿಯಲ್ಲಿ ಅತಿ ಹೆಚ್ಚು 68 ಪ್ರಕರಣ ಬೆಂಗಳೂರು ವಿಭಾಗದಲ್ಲಿ ದಾಖಲಾಗಿದೆ. ಮೊದಲ ಮೂರು ತಿಂಗಳಲ್ಲಿ 30 ಪ್ರಕರಣಗಳು ದಾಖಲಾಗಿ, ₹20 ಕೋಟಿ ಮೌಲ್ಯದ 277 ಕೆಜಿ ಗಾಂಜಾ ವಶಪಪಡಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಹೊರರಾಜ್ಯದ 13 ಮಂದಿ ಪೆಡ್ಲರ್ಸ್‌ಗಳನ್ನು ಬಂಧಿಸಲಾಗಿದೆ.
ಮೈಸೂರು ವಿಭಾಗದಲ್ಲಿ 13 ಪ್ರಕರಣಕ್ಕೆ ಸಂಬಂಧಿಸಿ ₹26 ಲಕ್ಷ ಮೌಲ್ಯದ 30 ಕೆಜಿ ಗಾಂಜಾ ವಶಪಡಿಸಿಕೊಂಡು, ಮೂವರನ್ನು ಬಂಧಿಸಲಾಗಿದೆ. ಹಾಗೆಯೇ, ಹುಬ್ಬಳ್ಳಿ ವಿಭಾಗದಲ್ಲಿ 13 ಪ್ರಕರಣ ದಾಖಲಿಸಿಕೊಂಡು ₹66 ಲಕ್ಷ ಮೌಲ್ಯದ 68 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ.
‘ಪ್ರಮುಖ ರೈಲು ನಿಲ್ದಾಣಗಳ ಪ್ರವೇಶ ದ್ವಾರದಲ್ಲಿ ಪ್ರಯಾಣಿಕರ ಸಾಮಗ್ರಿಗಳನ್ನು ತಪಾಸಣೆ ನಡೆಸಿ, ಒಳಗೆ ಬಿಡಲಾಗುತ್ತದೆ. ಸಣ್ಣ ರೈಲು ನಿಲ್ದಾಣಗಳಲ್ಲಿ ತಪಾಸಣೆ ವ್ಯವಸ್ಥೆ ಇರುವುದಿಲ್ಲ. ಪೆಡ್ಲರ್ಸ್‌ಗಳು ಅಲ್ಲಿಂದಲೇ ಮಾದಕ ವಸ್ತುಗಳನ್ನು ಸಾಗಿಸುತ್ತಾರೆ. ದಾಳಿ ನಡೆದಾಗ ಪೆಡ್ಲರ್ಸ್ ರೈಲಿನ ಯಾವುದೋ ಬೋಗಿಯಲ್ಲಿ ಇರುತ್ತಾನೆ. ಹೀಗಾಗಿ, ಮಾದಕ ವಸ್ತುಗಳು ಸಿಗುತ್ತವೆಯೇ ಹೊರತು ಪೆಡ್ಲರ್ಸ್‌ಗಳು ಸಿಕ್ಕಿಕೊಳ್ಳುವುದು ಅಪರೂಪ’ ಎಂದು ‘ಪ್ರಜಾವಾಣಿ’ಗೆ ನೈರುತ್ಯ ರೈಲ್ವೆ ಮುಖ್ಯ ಸಂಪರ್ಕಾಧಿಕಾರಿ (ಸಿಪಿಆರ್‌ಒ) ಮಂಜುನಾಥ ಕನಮಡಿ ತಿಳಿಸಿದರು.
‘ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ, ಆಂಧ್ರಪ್ರದೇಶದಿಂದ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ರೈಲುಗಳಲ್ಲಿ ಸುಲಭವಾಗಿ ಗಾಂಜಾ ಸಾಗಿಸುತ್ತಾರೆ. ವ್ಯವಹಾರವೆಲ್ಲ ಕೋಡ್ ವರ್ಡ್ ಮತ್ತು ಮೊಬೈಲ್ ಕರೆ ಮೂಲಕ ನಡೆಸುತ್ತಾರೆ’ ಎಂದು ತಿಳಿಸಿದರು.
ಮಾದಕ ವಸ್ತುಗಳ ಸಾಗಣೆ ಪತ್ತೆಗೆಂದೇ ಮೂರು ವಿಭಾಗಗಳಲ್ಲಿ ವಿಶೇಷ ಶ್ವಾನದಳವಿದೆ. ಪ್ರಸ್ತುತ ವರ್ಷಶ್ವಾನದಳದ ನೆರವಿನಲ್ಲಿ ₹1.08 ಕೋಟಿ ಮೌಲ್ಯದ 128 ಕೆ.ಜಿ. ಗಾಂಜಾ ಪತ್ತೆ ಮಾಡಲಾಗಿದೆಮಂಜುನಾಥ ಸಿಪಿಆರ್‌ಒ ನೈರುತ್ಯ ರೈಲ್ವೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.