ADVERTISEMENT

₹11 ಸಾವಿರ ಕೋಟಿ ಕೂಡಲೇ ವಾಪಸ್‌ ಮಾಡಿ: ಕಾರಜೋಳ ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2023, 14:57 IST
Last Updated 6 ಡಿಸೆಂಬರ್ 2023, 14:57 IST
<div class="paragraphs"><p>ಗೋವಿಂದ ಕಾರಜೋಳ</p></div>

ಗೋವಿಂದ ಕಾರಜೋಳ

   

ಬೆಂಗಳೂರು:  ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಮುದಾಯಕ್ಕೆ ಮಂಜೂರಾದ ₹11,144 ಕೋಟಿ ಅನುದಾನವನ್ನು ಬೇರೆಡೆ ವರ್ಗಾಯಿಸಿ, ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಆರೋಪಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆ ಹಣವನ್ನು ವಾಪಸ್‌ ಕೊಟ್ಟು ದಲಿತರ ಶಿಕ್ಷಣ, ಉದ್ಯೋಗ, ಭೂಒಡೆತನ ಯೋಜನೆ ಮತ್ತು ಗಂಗಾಕಲ್ಯಾಣ ಯೋಜನೆಗೆ ನೀಡಲು ಒತ್ತಾಯಿಸಿದ್ದೇವೆ. ಎಷ್ಟೇ ಒತ್ತಾಯ ಮಾಡಿದರೂ ಸಿದ್ದರಾಮಯ್ಯನವರು ಹಣ ವಾಪಸ್‌ ಕೊಡುತ್ತಿಲ್ಲ. ಆದ್ದರಿಂದ ಹೋರಾಟ ನಡೆಸುವುದು ಅನಿವಾರ್ಯ ಎಂದು ಹೇಳಿದರು.

ADVERTISEMENT

2022–23 ನೇ ಸಾಲಿನ ಅನುದಾನದಲ್ಲಿ 10 ನಿಗಮಗಳ ಮೂಲಕ 10 ಸಮುದಾಯಗಳ ಪರಿಶಿಷ್ಟ ಜಾತಿ ಮತ್ತು ಪಂಗಡಗಳ 50 ಸಾವಿರ ಜನರಿಗೆ ಸಾಲ ಮಂಜೂರು ಮಾಡಲಾಗಿತ್ತು. ಆದರೆ, ಸರ್ಕಾರ ಬದಲಾದ ಕೂಡಲೇ ಹಣ ಬಿಡುಗಡೆ ಮಾಡದೇ ದಲಿತರಿಗೆ ಅನ್ಯಾಯ ಮಾಡಿದ್ದಾರೆ. ಎಲ್ಲ ಫಲಾನುಭವಿಗಳೂ ಕೂಡಲೇ ಹಣ ಬಿಡುಗಡೆ ಮಾಡಬೇಕು ಎಂದು ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.