ADVERTISEMENT

ಹಂಪಿ ಗ್ರಾಮ ಪಂಚಾಯಿತಿ: ಕರ್ತವ್ಯ ನಿರತ ಕಾನ್‌ಸ್ಟೆಬಲ್‌ಗೆ ಹೃದಯಾಘಾತ

26 ವರ್ಷದ ನಂತರ ನಡೆಯುತ್ತಿರುವ ಮತದಾನ,

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2020, 4:06 IST
Last Updated 22 ಡಿಸೆಂಬರ್ 2020, 4:06 IST
ಹೊಸಪೇಟೆ ತಾಲ್ಲೂಕಿನ ಕಲ್ಲಹಳ್ಳಿಯಲ್ಲಿ ಮಂಗಳವಾರ ಮಹಿಳೆ ಹಕ್ಕು ಚಲಾಯಿಸಿದರು
ಹೊಸಪೇಟೆ ತಾಲ್ಲೂಕಿನ ಕಲ್ಲಹಳ್ಳಿಯಲ್ಲಿ ಮಂಗಳವಾರ ಮಹಿಳೆ ಹಕ್ಕು ಚಲಾಯಿಸಿದರು   

ಹೊಸಪೇಟೆ: ತಾಲ್ಲೂಕಿನ ಕಲ್ಲಹಳ್ಳಿ ಗ್ರಾಮ ಪಂಚಾಯಿತಿಗೆ 26 ವರ್ಷಗಳ ನಂತರ ಮತದಾನ ನಡೆಯುತ್ತಿದೆ.
ಇದುವರೆಗೆ ಈ ಪಂಚಾಯಿತಿಯಲ್ಲಿ ಎಲ್ಲ ಸದಸ್ಯರು ಅವಿರೋಧವಾಗಿ ಆಯ್ಕೆಯಾಗುತ್ತ ಬಂದದ್ದರಿಂದ ಚುನಾವಣೆ ನಡೆದಿರಲಿಲ್ಲ.

ದೀರ್ಘ ಸಮಯದ ನಂತರ ಚುನಾವಣೆ ನಡೆಯುತ್ತಿದ್ದು, ಜನರು ಉತ್ಸಾಹದಿಂದ ಹಕ್ಕು ಚಲಾಯಿಸುತ್ತಿದ್ದಾರೆ. ಕಲ್ಲಹಳ್ಳಿ ಪಂಚಾಯಿತಿಯ ಒಂಬತ್ತು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ.

ಹೃದಯಾಘಾತ: ತಾಲ್ಲೂಕಿನ ಹಂಪಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಕಡ್ಡಿರಾಂಪುರ ಗ್ರಾಮದ ಮತಗಟ್ಟೆ ಸಂಖ್ಯೆ ಮೂರರಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಕಾನ್ ಸ್ಟೆಬಲ್ ತಾವರೆ ನಾಯ್ಕ ಅವರಿಗೆ ಹೃದಯಾಘಾತವಾಗಿದ್ದು, ಅವರಿಗೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ADVERTISEMENT

13 ಪಂಚಾಯಿತಿಗೆ ಚುನಾವಣೆ: ತಾಲ್ಲೂಕಿನ 13 ಪಂಚಾಯಿತಿಗಳ 233 ಸ್ಥಾನಗಳಿಗೆ ಮತದಾನ ಭರದಿಂದ ನಡೆಯುತ್ತಿದೆ. ಚಳಿಯ ನಡುವೆಯೂ ಜನ ಮತಗಟ್ಟೆಗಳಿಗೆ ಬಂದು ಹಕ್ಕು ಚಲಾವಣೆ ಮಾಡುತ್ತಿದ್ದಾರೆ.

13 ಪಂಚಾಯಿತಿಗಳ 125 ಮತಗಟ್ಟೆಗಳ ಪೈಕಿ 114 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದೆ.41 ಸದಸ್ಯರು ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿರುವುದರಿಂದ 11 ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ನಡೆಯುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.