ADVERTISEMENT

ರಾಮನಗರ ಅಭಿವೃದ್ಧಿಗೆ ನನ್ನದೇ ದೊಡ್ಡ ಕೊಡುಗೆ: ಎಚ್‌.ಡಿ.ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 3 ಜನವರಿ 2022, 17:48 IST
Last Updated 3 ಜನವರಿ 2022, 17:48 IST
ಕುಮಾರಸ್ವಾಮಿ
ಕುಮಾರಸ್ವಾಮಿ   

ಮೈಸೂರು: ‘ರಾಮನಗರ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಿದ್ದು ನಾನು. ಆದರೆ, ವೇದಿಕೆ ಮೇಲೆ ಕಾಂಗ್ರೆಸ್‌, ಬಿಜೆಪಿ ಮುಖಂಡರು ಕಚ್ಚಾಡುತ್ತಿದ್ದಾರೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ದೂರಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ರಾಮನಗರ ಜಿಲ್ಲೆ ಮಾಡಿದ್ದು ನಾನು. 2006ರಲ್ಲಿ ರಾಜೀವ್‌ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ, ಹೈಟೆಕ್‌ ಆಸ್ಪತ್ರೆ, ನರ್ಸಿಂಗ್‌ ಕಾಲೇಜು ನಿರ್ಮಾಣಕ್ಕೆ ಚಾಲನೆ ನೀಡಿ ಹಣ ಬಿಡುಗಡೆ ಮಾಡಿದ್ದೆ. ಬಿಜೆಪಿ ಸರ್ಕಾರದಿಂದ ಕೆಲಸ ನಡೆಯಲಿಲ್ಲ. ಕಾಂಗ್ರೆಸ್‌ ಕೂಡ ಏನೂ ಮಾಡಲಿಲ್ಲ’ ಎಂದು ಟೀಕಿಸಿದರು.

‘2012ರಲ್ಲಿ ಕಾಂಗ್ರೆಸ್‌ ನಡಿಗೆ ಕೃಷ್ಣ ಕಡೆಗೆ ಯಾತ್ರೆ ಮಾಡಿ ಏನು ಸಾಧನೆ ಮಾಡಿದರು? ಮೇಕೆದಾಟು ಪಾದಯಾತ್ರೆ ಮಾತ್ರವಲ್ಲ; ಇನ್ನೂ ನೂರು ಪಾದಯಾತ್ರೆ ಮಾಡಲಿ. ನನಗೇನೂ ಆತಂಕವಿಲ್ಲ. ಆದರೆ, ಓಮೈಕ್ರಾನ್‌ ಹೆಚ್ಚುತ್ತಿರುವ ಕಾಲಘಟ್ಟದಲ್ಲಿ ಕಾಂಗ್ರೆಸ್‌ ಸ್ವಾರ್ಥಕ್ಕಾಗಿ ಪಾದಯಾತ್ರೆ ಅಗತ್ಯವಿದೆಯೇ?’ ಎಂದು ಪ್ರಶ್ನಿಸಿದರು.

ADVERTISEMENT

‘ರಾಜ್ಯದ ನೀರಾವರಿ ಯೋಜನೆಗಳಿಗೆ ದೇವೇಗೌಡರ ಕೊಡುಗೆ ದೊಡ್ಡದು. ಐದು ನೀರಾವರಿ ಯೋಜನೆಗಳಿಗೆ ಸಂಬಂಧಿಸಿ ನಾನು ರೂಪಿಸಿದ ಕಾರ್ಯಕ್ರಮಗಳ ಪೈಕಿ ಮೇಕೆದಾಟು ಕೂಡ ಒಂದು. ಅದನ್ನು ಕಾಂಗ್ರೆಸ್‌ ಈಗ ಕೈಗೆತ್ತಿಕೊಂಡಿದೆ. ಅದು ಹೈಜಾಕ್‌ ಆಗಿದೆ ಎಂದು ಹೇಳುವುದಿಲ್ಲ‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.