ADVERTISEMENT

ಹೈಕಮಾಂಡ್ ಸುಮ್ಮನಿದೆ ಎಂದರೆ ಬದಲಾವಣೆ ಇಲ್ಲ ಎಂದರ್ಥ: ಗೃಹ ಸಚಿವ ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2026, 7:16 IST
Last Updated 7 ಫೆಬ್ರುವರಿ 2026, 7:16 IST
<div class="paragraphs"><p>ಜಿ. ಪರಮೇಶ್ವರ&nbsp;</p></div>

ಜಿ. ಪರಮೇಶ್ವರ 

   

ಮೈಸೂರು: 'ಪಕ್ಷದೊಳಗೆ ಮುಖ್ಯಮಂತ್ರಿ ಅಧಿಕಾರ ಹಂಚಿಕೆಯ ಪ್ರಸ್ತಾವವೇ ನಡೆದಿಲ್ಲ. ಹೈಕಮಾಂಡ್ ಸುಮ್ಮನಿದೆ ಎಂದರೆ ಅದರಲ್ಲಿ ಬದಲಾವಣೆಗಳು ಇಲ್ಲ ಎಂದರ್ಥ' ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಹೇಳಿದರು.

ಇಲ್ಲಿ ಶನಿವಾರ ಪತ್ರಕರ್ತರಿಗೆ ಪ್ರತಿಕ್ರಿಯೆ ನೀಡಿದ ಅವರು ' ಸಿದ್ದರಾಮಯ್ಯ ಮುಖ್ಯಮಂತ್ರಿ ಎಂದು ಹೈಕಮಾಂಡ್ ಘೋಷಣೆ ಮಾಡಿತ್ತು. ಆದರೆ ಅವರ ಬದಲಾವಣೆ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ. ವರಿಷ್ಢರು ಅಗತ್ಯ ಇದ್ದಾಗ ಮಾತನಾಡುತ್ತಾರೆ' ಎಂದರು.

ADVERTISEMENT

'ಮುಖ್ಯಮಂತ್ರಿ ಕುರ್ಚಿಯ ಬಗ್ಗೆ ಗೊಂದಲ ಇದ್ದಿದ್ದರೆ ಶಾಸಕರು ಸಿಎಲ್ ಪಿ ಸಭೆಯಲ್ಲಿ ಹೇಳುತ್ತಿದ್ದರು. ಅಲ್ಲಿ ಯಾರು ಕೂಡ ಈ ಬಗ್ಗೆ ಮಾತನಾಡಿಲ್ಲ. ಅಲ್ಲಿಗೆ ಯಾವ ಗೊಂದಲವೂ ಇಲ್ಲ ಎಂದರ್ಥ' ಎಂದರು.

ಎನ್ ಸಿಬಿ ದ್ವಂದ ಹೇಳಿಕೆ:

'ಮೈಸೂರಿನಲ್ಲಿ ಯಾವುದೇ ಡ್ರಗ್ಸ್ ಪತ್ತೆ ಆಗಿಲ್ಲ. ಎನ್ ಸಿಬಿ ನ್ಯಾಯಾಲಯಕ್ಕೆ ಸಲ್ಲಿಸಿರುವ ಮಾಹಿತಿಯಲ್ಲಿ ಡ್ರಗ್ಸ್ ಸಿಕ್ಕಿಲ್ಲ ಎಂದಿದೆ. ಆದರೆ ಪತ್ರಿಕಾ ಹೇಳಿಕೆಯಲ್ಲಿ ಸಿಕ್ಕಿದೆ ಎಂದು ಹೇಳಿದೆ. ಯಾಕೆ ಈ ರೀತಿ ದ್ವಂದ ಹೇಳಿಕೆ ನೀಡಿದೆಯೋ ಗೊತ್ತಿಲ್ಲ' ಎಂದರು.

'ಎನ್ ಸಿಬಿ ದಾಳಿ ನಡೆಸಿದಾಗ ನಮ್ಮ ಪೊಲೀಸರೂ ಜೊತೆಯಲ್ಲಿ ಇದ್ದರು. ಇದರ ಹಿಂದಿನ ಉದ್ದೇಶವನ್ನು ಅವರೇ ಹೇಳಬೇಕು' ಎಂದರು.‌

'ರಾಜ್ಯದ ಎಲ್ಲ ಕೆಮಿಕಲ್ ಕಾರ್ಖಾನೆಗಳ ಮೇಲೆ ನಿಗಾ ವಹಿಸುವಂತೆ ಸೂಚಿಸಿದ್ದೇನೆ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.