ADVERTISEMENT

16 ಐಎಎಸ್‌ ಅಧಿಕಾರಿಗಳ ವರ್ಗ

ಮಂಡ್ಯಕ್ಕೆ ಮಂಜುಶ್ರೀ, ವಿಜಯಪುರಕ್ಕೆ ವೈ.ಎಸ್‌. ಪಾಟೀಲ ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 31 ಮೇ 2019, 20:00 IST
Last Updated 31 ಮೇ 2019, 20:00 IST

ಬೆಂಗಳೂರು: ಲೋಕಸಭೆ ಚುನಾವಣೆಯ ಹೊತ್ತಿನಲ್ಲಿ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ವರ್ಗಾವಣೆ ಮಾಡಲಾಗಿದ್ದ 16 ಐಎಎಸ್‌ ಅಧಿಕಾರಿಗಳನ್ನು ಮತ್ತೆ ಅವರು ಹಿಂದೆ ಹೊಂದಿದ್ದ ಹುದ್ದೆಗಳಿಗೆ ವರ್ಗಾವಣೆ ಮಾಡಲಾಗಿದೆ.

ವರ್ಗಾವಣೆಯಾದವರು:ತುಷಾರ್ ಗಿರಿನಾಥ್–ಅಧ್ಯಕ್ಷ, ಬೆಂಗಳೂರು ಜಲಮಂಡಳಿ. ಟಿ.ಕೆ. ಅನಿಲ್‌ ಕುಮಾರ್–ಕಾರ್ಯದರ್ಶಿ, ಪ್ರವಾಸೋದ್ಯಮ ಇಲಾಖೆ. ಡಾ.ಪಿ.ಸಿ. ಜಾಫರ್‌–ಆಯುಕ್ತ, ಸಾರ್ವಜನಿಕ ಶಿಕ್ಷಣ ಇಲಾಖೆ. ಶಿವಯೋಗಿ ಸಿ. ಕಳಸದ–ವ್ಯವಸ್ಥಾಪಕ ನಿರ್ದೇಶಕ, ಕೆಎಸ್‌ಆರ್‌ಟಿಸಿ ಹಾಗೂ ಪ್ರಾದೇಶಿಕ ಆಯುಕ್ತ, ಬೆಂಗಳೂರು. ಡಾ.ಆರ್. ವಿಶಾಲ್‌–ಆಯುಕ್ತ, ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಸಂಸ್ಥೆ. ಡಾ.ಎಂ. ಲೋಕೇಶ್–ವಿಶೇಷ ಆಯುಕ್ತ (ಹಣಕಾಸು ಮತ್ತು ಐ.ಟಿ), ಬಿಬಿಎಂಪಿ.

ಡಿ.ರಂದೀಪ್‌–ಹೆಚ್ಚುವರಿ ಆಯುಕ್ತ (ಆಡಳಿತ), ಬಿಬಿಎಂಪಿ. ಎಸ್.ಎಸ್. ನಕುಲ್‌–ನಿರ್ದೇಶಕ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ. ಎಂ. ಕನಗವಲ್ಲಿ, ಆಯುಕ್ತೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ. ಎನ್‌. ಮಂಜುಶ್ರೀ–ಜಿಲ್ಲಾಧಿಕಾರಿ, ಮಂಡ್ಯ. ಎಸ್.ಬಿ. ಬೊಮ್ಮನಹಳ್ಳಿ–ಜಿಲ್ಲಾಧಿಕಾರಿ, ಬೆಳಗಾವಿ. ಡಾ.ಅವಿನಾಶ್ ಮೆನನ್ ರಾಜೇಂದ್ರನ್‌–ಹೆಚ್ಚುವರಿ ಆಯುಕ್ತ, ವಾಣಿಜ್ಯ ತೆರಿಗೆ (ಸೇವಾ ಘಟಕ), ಬೆಂಗಳೂರು. ವೈ.ಎಸ್‌. ಪಾಟೀಲ–ಜಿಲ್ಲಾಧಿಕಾರಿ, ವಿಜಯಪುರ. ವಿ. ಯಶವಂತ್–ಪ್ರಾದೇಶಿಕ ಆಯುಕ್ತ, ಮೈಸೂರು. ಪಿ.ಎ. ಮೇಘಣ್ಣನವರ–ಪ್ರಾದೇಶಿಕ ಆಯುಕ್ತ, ಬೆಳಗಾವಿ.

ADVERTISEMENT

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನೆಲಮಂಗಲ–ಕುಣಿಗಲ್‌ ವಿಭಾಗದ ವಿಶೇಷ ಭೂಸ್ವಾಧೀನಾಧಿಕಾರಿಯಾಗಿದ್ದ ಜಿ. ಲಕ್ಷ್ಮಿಕಾಂತ್ ರೆಡ್ಡಿ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಹುದ್ದೆ ತೋರಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.