ನರೇಂದ್ರ ಮೋದಿ ಮತ್ತು ಪ್ರಕಾಶ್ ರಾಜ್
ಬೆಂಗಳೂರು: ಚುನಾವಣಾ ಬಾಂಡ್ ಯೋಜನೆ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಟ ಪ್ರಕಾಶ್ ರಾಜ್ ವಾಗ್ದಾಳಿ ನಡೆಸಿದ್ದಾರೆ.
ಚುನಾವಣಾ ಬಾಂಡ್ ಯೋಜನೆ ಕುರಿತು ಎರಡು ಮೀಮ್‌ಗಳ ಸಮೇತ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಶ್ರೀ ಶ್ರೀ ಶ್ರೀ ವಿಶ್ವಗುರು.. ವಸೂಲಿಗುರು ಮಹಾಪ್ರಭುಗಳೇ.. ನಿಮ್ಮ ‘ಮನ್ ಕಿ ಬಾತ್’ ಕಾರ್ಯಕ್ರಮದಿಂದಾಗಿ ಯಾರಿಂದ ಎಷ್ಟು ವಸೂಲಿ ಮಾಡಿದ್ರಿ ಅಂತ ಹೇಳ್ತೀರಾ’ ಎಂದು ಲೇವಡಿ ಮಾಡಿದ್ದಾರೆ.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೋದಿ ಅವರು ‘ದೇಣಿಗೆ ಪಡೆಯುತ್ತಿದ್ದಾರೋ ಅಥವಾ ದಂಧೆ ನಡೆಸುತ್ತಿದ್ದಾರೋ ಗೊತ್ತಿಲ್ಲ’ ಎಂದು ವ್ಯಂಗ್ಯಭರಿತ ಮೀಮ್ ಹಂಚಿಕೊಂಡಿದ್ದಾರೆ.
‘ಖುದ್ದು ₹12,000 ಕೋಟಿ ತಿಂದು ನಮಗೆ ಎರಡು ರೂಪಾಯಿ ಕೊಡ್ತಿದ್ದಾನೆ ಪಾಪಿ’ ಎಂದು ಮತ್ತೊಂದು ವ್ಯಂಗ್ಯ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.