ADVERTISEMENT

ರೋಗ ಲಕ್ಷಣ ಇಲ್ಲದಿದ್ದರೆ ಪ್ರತ್ಯೇಕ ವಾಸ ಇಲ್ಲ: ಪಂಕಜ್ ಕುಮಾರ್‌ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 15 ಮೇ 2020, 5:09 IST
Last Updated 15 ಮೇ 2020, 5:09 IST
ಪಂಕಜ್ ಕುಮಾರ್‌ ಪಾಂಡೆ
ಪಂಕಜ್ ಕುಮಾರ್‌ ಪಾಂಡೆ    
""

ಬೆಂಗಳೂರು: ಲಾಕ್‌ಡೌನ್‌ ಅವಧಿಯಲ್ಲಿ ಅಂತರ್‌ ಜಿಲ್ಲಾ ಪ್ರವಾಸ ಮಾಡಿರುವ ವ್ಯಕ್ತಿಗಳಿಗೆ ಕೋವಿಡ್‌–19 ರೋಗ ಲಕ್ಷಣ ಇಲ್ಲದಿದ್ದರೆ ಅಂತಹ ಪ್ರಯಾಣಿಕರನ್ನು ಕ್ವಾರಂಟೈನ್‌ಗೆ (ಪ್ರತ್ಯೇಕ ವಾಸ) ಒಳ‍ಪಡಿಸುವ ಅಗತ್ಯ ಇಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಪಂಕಜ್ ಕುಮಾರ್‌ ಪಾಂಡೆ ಸ್ಪಷ್ಟಪಡಿಸಿದ್ದಾರೆ.

ಈ ಸಂಬಂಧ ಅವರು ಮೇ 14ರಂದು ಆದೇಶ ಹೊರಡಿಸಿದ್ದಾರೆ. ಮೂರನೇ ಹಂತದ ಲಾಕ್‌ಡೌನ್‌ ವೇಳೆಯಲ್ಲಿ ಅನುಮತಿ ಪಡೆದು ಅಂತರ್‌ ಜಿಲ್ಲಾ ಪ್ರವಾಸಕ್ಕೆ ಅವಕಾಶ ನೀಡಲಾಗಿತ್ತು. ಒಂದು ಊರಿನಿಂದ ಮತ್ತೊಂದು ಊರಿಗೆ ತೆರಳಲು ಅವಕಾಶ ಕಲ್ಪಿಸಲಾಗಿತ್ತು. ಬಳಿಕ ಒಂದು ಜಿಲ್ಲೆಯೊಂದು ಮತ್ತೊಂದು ಜಿಲ್ಲೆಗೆ ಹೋಗಿ ಬರಬಹುದು ಎಂದು ಆದೇಶ ಹೊರಡಿಸಲಾಗಿತ್ತು. ಈ ಸಂಬಂಧ ಪೊಲೀಸ್‌ ಇಲಾಖೆಯಿಂದ ಇ–ಪಾಸ್‌ ಪಡೆಯಬೇಕಿತ್ತು. ಎರಡು ದಿನಗಳೊಳಗೆ ಊರಿಗೆ ಹೋಗಿ ಮರಳಬೇಕು ಎಂದು ಸೂಚಿಸಲಾಗಿತ್ತು.

ಎರಡು ದಿನಗಳ ಬಳಿಕ ಉಳಿದರೆ ಕ್ವಾರಂಟೈನ್‌ ಮಾಡಲಾಗುತ್ತದೆ ಎಂದು ಪೊಲೀಸ್‌ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಎಚ್ಚರಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತವಾಗಿತ್ತು. ಜಿಲ್ಲಾ ಗಡಿಯಲ್ಲಿ ತಪಾಸಣೆ ನಡೆಸಿಯೇ ಪ್ರವೇಶ ನೀಡಲಾಗುತ್ತದೆ. ರೋಗ ಲಕ್ಷಣ ಇಲ್ಲದಿದ್ದರೆ ಪ್ರತ್ಯೇಕ ವಾಸದ ಅಗತ್ಯ ಏನಿದೆ ಎಂದು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ ಇಲಾಖೆ ಈ ಸಂಬಂಧ ಸ್ಪಷ್ಟನೆ ನೀಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.