
ಸಾಂದರ್ಭಿಕ ಚಿತ್ರ
ಕೃಪೆ: ಎಐ
ಜನವರಿಯಲ್ಲಿ ವಿವಿಧ ಧಾರ್ಮಿಕ ಹಾಗೂ ಸರ್ಕಾರಿ ಹಬ್ಬದ ದಿನಗಳು ಇರುವುದರಿಂದ ಅನೇಕ ಸರ್ಕಾರಿ ರಜಾ ದಿನಗಳು ಸಿಗಲಿವೆ. ವಿಶೇಷವಾಗಿ ಜನವರಿ 10ರಿಂದ 18ರ ಅವಧಿಯಲ್ಲಿ ನಾಲ್ಕು ದಿನ ರಜೆಗಳು ಸಿಗಲಿವೆ. ಆ ದಿನಗಳು ಯಾವುವು ಎಂಬುದನ್ನು ನೋಡೋಣ.
ಜನವರಿ 10ರಂದು ಎರಡನೇ ಶನಿವಾರದ ರಜೆ, ಈ ದಿನ ಸರ್ಕಾರಿ ಶಾಲಾ–ಕಾಲೇಜುಗಳಿಗೆ ರಜೆ ಇಲ್ಲದಿದ್ದರೂ, ಸರ್ಕಾರಿ ಕಚೇರಿಗಳು ಹಾಗೂ ಬ್ಯಾಂಕುಗಳಿಗೆ ರಜೆ ಇರಲಿದೆ. ಜೊತೆಗೆ 11ನೇ ತಾರೀಕು ಭಾನುವಾರ ಬಂದಿದ್ದು, ಎರಡು ದಿನ ಸತತ ರಜೆಗಳು ಇರಲಿವೆ.
ಜನವರಿ 15 ಸಂಕ್ರಾಂತಿ ರಜೆ
ಜನವರಿ 14ರಂದು ಹಿಂದೂಗಳ ಪವಿತ್ರ ಹಾಗೂ ಸುಗ್ಗಿ ಹಬ್ಬವೆಂದೇ ಕರೆಯುವ ಸಾಂಕ್ರಾತಿ ಹಬ್ಬವಿದೆ. ಈ ಹಬ್ಬವನ್ನು ಭಾರತದ ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರಿನಿಂದ ಆಚರಣೆ ಮಾಡಲಾಗುತ್ತದೆ. ಅದರೆ, ಈ ಹಬ್ಬದ ಪ್ರಯುಕ್ತ ಜನವರಿ 15ರಂದು ಸರ್ಕಾರಿ ರಜೆ ನೀಡಲಾಗಿದೆ.
ಇದರ ಜೊತೆಗೆ ಜನವರಿ 18ರಂದು ಭಾನುವಾರದ ರಜೆ ಕೂಡ ಸಿಗಲದೆ. ಜನವರಿಯ ಎರಡನೇ ಶನಿವಾರದಿಂದ 18ರ ವರೆಗೆ ನಾಲ್ಕು ರಜಾ ದಿನಗಳು ಸಿಗಲಿವೆ.
ಸೂರ್ಯನು ದಕ್ಷಿಣದಿಂದ ಉತ್ತರ ಪಥಕ್ಕೆ ಚಲಿಸುವ ಉತ್ತರಾಯಣದ ಪುಣ್ಯಕಾಲವನ್ನು ಸಂಕ್ರಾಂತಿ ಹಬ್ಬವನ್ನಾಗಿ ಆಚರಣೆ ಮಾಡಲಾಗುತ್ತದೆ. ಇದನ್ನು ದೇಶಾದ್ಯಂತ ವಿಭಿನ್ನ ಹೆಸರುಗಳಿಂದ ಆಚರಿಸಲಾಗುತ್ತದೆ. ಇದು ಸೂರ್ಯನು ಧನು ರಾಶಿಯನ್ನು ಬಿಟ್ಟು ಮಕರ ರಾಶಿಗೆ ಪ್ರವೇಶಿಸುವ ದಿನವಾಗಿದೆ.
ಪಂಚಾಂಗದ ಪ್ರಕಾರ, ಜನವರಿ 14ರಂದು ಸೂರ್ಯನು ಮಕರ ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ. ಹೀಗಾಗಿ ಸಂಕ್ರಾಂತಿ ಜನವರಿ 14ರಂದು ಆಚರಿಸಲಾಗುತ್ತದೆ. ಆದರೆ, ಕರ್ನಾಟಕ ಸರ್ಕಾರಿ ಸಂಕ್ರಾಂತಿ ರಜೆಯನ್ನು ಜನವರಿ 15ರಂದು ನೀಡಿದೆ.