
ಜನವರಿಯಲ್ಲಿ ವಿವಿಧ ಧಾರ್ಮಿಕ ಹಾಗೂ ಸರ್ಕಾರಿ ಹಬ್ಬದ ದಿನಗಳು ಇರುವುದರಿಂದ ಅನೇಕ ಸರ್ಕಾರಿ ರಜಾ ದಿನಗಳು ಸಿಗಲಿವೆ. ಜನವರಿ ತಿಂಗಳಿನಲ್ಲಿ ಪ್ರಮುಖ ಹಬ್ಬಗಳಾದ ಸಂಕ್ರಾಂತಿ, ಪಂಚಮಿಯ ಜೊತೆಗೆ ಗಣರಾಜ್ಯೋತ್ಸವ ಕೂಡ ಇದೆ.
ಜನವರಿ 14 (ಬುಧವಾರ): ಮಕರ ಸಂಕ್ರಾಂತಿ
ಜನವರಿ ತಿಂಗಳಲ್ಲಿ ಹಿಂದೂಗಳ ಪವಿತ್ರ ಹಾಗೂ ಸುಗ್ಗಿ ಹಬ್ಬವೆಂತಲೇ ಕರೆಯುವ ಸಾಂಕ್ರಾತಿ ಹಬ್ಬವಿದೆ. ಈ ಹಬ್ಬವನ್ನು ಭಾರತದ ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರಿನಿಂದ ಆಚರಣೆ ಮಾಡುತ್ತಾರೆ. ಅದರಲ್ಲಿಯೂ ವಿಶೇಷವಾಗಿ ತಮಿಳುನಾಡು, ಕರ್ನಾಟಕ ಮತ್ತು ಅಸ್ಸಾಂ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಆಚರಣೆ ಇದೆ. ಈ ದಿನ ದೇಶದಾದ್ಯಂತ ಸರ್ಕಾರಿ ರಜೆ ಇರಲಿದೆ.
ಜನವರಿ 23 (ಶುಕ್ರವಾರ) : ಪಂಚಮಿ
ಈ ದಿನವನ್ನು ದೇಶದಾದ್ಯಂತ ಸರಸ್ಪತಿ ಪೂಜೆಯಾಗಿ ಆಚರಣೆ ಮಾಡುತ್ತಾರೆ. ಈ ದಿನ ಸರ್ಕಾರಿ ರಜೆ ಇರುತ್ತದೆ. ಇದು ವಸಂತ ಕಾಲದ ಆರಂಭ ಎಂದೆನ್ನಲಾಗುತ್ತದೆ. ಇದೆ ದಿನ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜಯಂತಿ ಕೂಡ ಇರಲಿದೆ.
ಜನವರಿ 26 (ಸೋಮವಾರ): ಗಣರಾಜ್ಯೋತ್ಸವ
ಈ ದಿನ ದೇಶದ ಎಲ್ಲಾ ಸರ್ಕಾರಿ ಕಚೇರಿ, ಶಾಲೆಗಳು, ಬ್ಯಾಂಕ್‌ಗಳು ಹಾಗೂ ಇತರೆ ಖಾಸಗಿ ಸಂಸ್ಥೆಗಳಲ್ಲೂ ಆದ್ಯತೆ ರಜೆ ಇರಲಿದೆ.
ಇದನ್ನು ಹೊರೆತುಪಡಿಸಿ, ಭಾನುವಾರಗಳು, 2 ಮತ್ತು 4ನೇ ಶನಿವಾರ ಬ್ಯಾಂಕ್ ಸೇರಿದಂತೆ ಕೆಲವು ಖಾಸಗಿ ಶಾಲೆಗಳಿಗೂ ರಜೆ ಇರುತ್ತದೆ. ಹಾಗಾಗಿ, ಈ ತಿಂಗಳು ರಜಾ ದಿನಗಳು ಹೆಚ್ಚಾಗಿರುವುದರಿಂದ ಈ ರಜೆಗಳ ಆಧಾರದಲ್ಲಿ ಪ್ರವಾಸಕ್ಕೆ ಯೋಜನೆ ಮಾಡಿಕೊಳ್ಳಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.