ADVERTISEMENT

ವೈದ್ಯರ ಬೇಡಿಕೆಗೆ ಸ್ಪಂದಿಸಿ ಭತ್ಯೆ ಪರಿಷ್ಕರಿಸಿದ ಸರ್ಕಾರ

ವೈದ್ಯರ ಬೇಡಿಕೆಗೆ ಸ್ಪಂದಿಸಿದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2020, 8:19 IST
Last Updated 22 ಡಿಸೆಂಬರ್ 2020, 8:19 IST
ವೈದ್ಯರ ಭತ್ಯೆ ಪರಿಷ್ಕರಿಸಿದ ಸರ್ಕಾರ
ವೈದ್ಯರ ಭತ್ಯೆ ಪರಿಷ್ಕರಿಸಿದ ಸರ್ಕಾರ   

ಬೆಂಗಳೂರು: ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿವಿಧ ವೃಂದಗಳ ತಜ್ಞ ವೈದ್ಯರು, ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ ಹಾಗೂ ದಂತ ಆರೋಗ್ಯಾಧಿಕಾರಿಗಳಿಗೆ ವಿಶೇಷ ಭತ್ಯೆಗಳನ್ನು ಪರಿಷ್ಕರಿಸಿ ಆದೇಶ ಹೊರಡಿಸಲಾಗಿದೆ.

ಕೋವಿಡ್ ಸಂದರ್ಭದಲ್ಲಿ ವೈದ್ಯರು ಸಲ್ಲಿಸುತ್ತಿರುವ ಸೇವೆಯನ್ನು ಗುರುತಿಸಿ ಮತ್ತು ಭವಿಷ್ಯದಲ್ಲಿ ಯುವ ವೈದ್ಯರು ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಮಾಡಲು ಪ್ರೋತ್ಸಾಹಿಸಲು ತಜ್ಞ ವೈದ್ಯರು, ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ & ದಂತ ಆರೋಗ್ಯಾಧಿಕಾರಿಗಳಿಗೆ 2020 ರ ಸೆಪ್ಟೆಂಬರ್ 1 ರಿಂದ ಜಾರಿಗೆ ಬರುವಂತೆ ವಿಶೇಷ ಭತ್ಯೆಗಳನ್ನು ಪರಿಷ್ಕರಿಸಲಾಗಿದೆ.

ಈ ಹಿಂದೆ 2015 ರಲ್ಲಿ ವಿಶೇಷ ಭತ್ಯೆಗಳನ್ನು ಪರಿಷ್ಕರಿಸಲಾಗಿತ್ತು. 0-6 ವರ್ಷ ಸೇವೆ ಸಲ್ಲಿಸಿದ ಎಂಬಿಬಿಎಎಸ್/ಬಿಡಿಎಸ್ ವಿದ್ಯಾರ್ಹತೆ ಇರುವವರಿಗೆ ಮಾಸಿಕ ₹ 21,000ದಿಂದ ₹30,500, ಸ್ನಾತಕೋತ್ತರ ಪದವಿ/ಡಿಪ್ಲೊಮಾ ವಿದ್ಯಾರ್ಹತೆ ಇರುವವರಿಗೆ ಮಾಸಿಕ ₹42,600 ನಿಂದ ₹55,500, ಸೂಪರ್ ಸ್ಪೆಷಾಲಿಟಿ ವಿದ್ಯಾರ್ಹತೆ ಇರುವವರಿಗೆ ಮಾಸಿಕ ₹50,800 ನಿಂದ ₹64,500 ಗೆ ಹೆಚ್ಚಿಸಲಾಗಿದೆ.

ADVERTISEMENT

6-13 ವರ್ಷ ಸೇವೆ ಸಲ್ಲಿಸಿದ ಎಂಬಿಬಿಎಸ್/ಬಿಡಿಎಸ್ ಅರ್ಹತೆ ಹೊಂದಿದವರಿಗೆ ಮಾಸಿಕ ₹22,000 ನಿಂದ ₹37,500, ಸ್ನಾತಕೋತ್ತರ ಪದವಿ/ಡಿಪ್ಲೊಮಾ ವಿದ್ಯಾರ್ಹತೆ ಇರುವವರಿಗೆ ಮಾಸಿಕ ₹43,700 ನಿಂದ ₹64,500., ಸೂಪರ್ ಸ್ಪೆಷಾಲಿಟಿ ವಿದ್ಯಾರ್ಹತೆ ಇರುವವರಿಗೆ ಮಾಸಿಕ ₹52,100 ನಿಂದ ₹ 73,500 ರೂ.ಗೆ ಹೆಚ್ಚಿಸಲಾಗಿದೆ.

13-20 ವರ್ಷ ಸೇವೆ ಸಲ್ಲಿಸಿದ ಎಂಬಿಬಿಎಸ್/ಬಿಡಿಎಸ್ ಅರ್ಹತೆ ಹೊಂದಿದವರಿಗೆ ಮಾಸಿಕ ₹23,000 ನಿಂದ ₹44,500 , ಸ್ನಾತಕೋತ್ತರ ಪದವಿ/ಡಿಪ್ಲೊಮಾ ವಿದ್ಯಾರ್ಹತೆ ಇರುವವರಿಗೆ ಮಾಸಿಕ ₹44,800 ನಿಂದ ₹73,500., ಸೂಪರ್ ಸ್ಪೆಷಾಲಿಟಿ ವಿದ್ಯಾರ್ಹತೆ ಇರುವವರಿಗೆ ಮಾಸಿಕ ₹58,400 ನಿಂದ ₹83,500 ಗೆ ಹೆಚ್ಚಿಸಲಾಗಿದೆ.

20-25 ವರ್ಷ ಸೇವೆ ಸಲ್ಲಿಸಿದ ಎಂಬಿಬಿಎಸ್/ಬಿಡಿಎಸ್ ಅರ್ಹತೆ ಹೊಂದಿದವರಿಗೆ ಮಾಸಿಕ ₹23,000 ನಿಂದ ₹52,500 , ಸ್ನಾತಕೋತ್ತರ ಪದವಿ/ಡಿಪ್ಲೊಮಾ ವಿದ್ಯಾರ್ಹತೆ ಇರುವವರಿಗೆ ಮಾಸಿಕ ₹44,800 ನಿಂದ ₹83,500 , ಸೂಪರ್ ಸ್ಪೆಷಾಲಿಟಿ ವಿದ್ಯಾರ್ಹತೆ ಇರುವವರಿಗೆ ಮಾಸಿಕ ₹58,400 ನಿಂದ ₹93,500 ಗೆ ಹೆಚ್ಚಿಸಲಾಗಿದೆ.

25 ವರ್ಷಕ್ಕಿಂತ ಹೆಚ್ಚು ವರ್ಷ ಸೇವೆ ಸಲ್ಲಿಸಿದ ಎಂಬಿಬಿಎಸ್/ಬಿಡಿಎಸ್ ಅರ್ಹತೆ ಹೊಂದಿದವರಿಗೆ ಮಾಸಿಕ ₹23,000 ನಿಂದ ₹60,500 , ಸ್ನಾತಕೋತ್ತರ ಪದವಿ/ಡಿಪ್ಲೊಮಾ ವಿದ್ಯಾರ್ಹತೆ ಇರುವವರಿಗೆ ಮಾಸಿಕ ₹44,800 ನಿಂದ ₹93,500 , ಸೂಪರ್ ಸ್ಪೆಷಾಲಿಟಿ ವಿದ್ಯಾರ್ಹತೆ ಇರುವವರಿಗೆ ಮಾಸಿಕ ₹58,400 ನಿಂದ ₹1,03,500 ಗೆ ಹೆಚ್ಚಿಸಲಾಗಿದೆ.

ಕರ್ನಾಟಕ ವೈದ್ಯಾಧಿಕಾರಿಗಳ ಸಂಘವು ಸಿಜಿಎಚ್ ಸಿ ಮಾದರಿಯಲ್ಲಿ ಭತ್ಯೆ ಪರಿಷ್ಕರಿಸುವಂತೆ ಕೋರಿತ್ತು. ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಸಭೆ ನಡೆಸಿ ಈ ಕುರಿತು ಚರ್ಚೆ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.