ADVERTISEMENT

ಪ್ರಶ್ನೋತ್ತರ (ವಿಧಾನಸಭೆ): ಬಿಪಿಎಲ್‌ ಕಾರ್ಡ್‌; ಆದಾಯ ಮಿತಿ ಪರಿಷ್ಕರಣೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2025, 23:49 IST
Last Updated 18 ಡಿಸೆಂಬರ್ 2025, 23:49 IST
ಬೆಳಗಾವಿ ಸುವರ್ಣಸೌಧ
ಬೆಳಗಾವಿ ಸುವರ್ಣಸೌಧ    

ಬಿಪಿಎಲ್‌ ಕಾರ್ಡ್‌: ಆದಾಯ ಮಿತಿ ಪರಿಷ್ಕರಣೆ

ಬಿಪಿಎಲ್‌ ಕಾರ್ಡ್‌ದಾರರ ಆದಾಯ ಮಿತಿ ಪರಿಷ್ಕರಣೆಗೆ ಚಿಂತನೆ ನಡೆಸಲಾಗಿದೆ. ಕೇಂದ್ರ ಸರ್ಕಾರ ಬಿಪಿಎಲ್ ಕಾರ್ಡ್‌ದಾರರ ಆದಾಯ ಮಿತಿಯನ್ನು ₹1.20 ಲಕ್ಷಕ್ಕೆ ಮಿತಿಗೊಳಿಸಿದೆ. ಆದರೆ ಕೂಲಿ ಕೆಲಸಗಾರರಿಗೆ ಪ್ರತಿ ದಿನ ₹500 ಕೂಲಿ ದೊರೆಯುತ್ತದೆ. ಇದರ ಆಧಾರದಲ್ಲಿ ಕೂಲಿ ಮಾಡುವವರ ಆದಾಯವೂ ವರ್ಷಕ್ಕೆ ₹1.80 ಲಕ್ಷಕ್ಕೂ ಅಧಿಕವಾಗಿದೆ. ಈ ಕಾರಣಕ್ಕೆ ಆದಾಯ ಮಿತಿ ಪರಿಷ್ಕರಿಸಲಾಗುವುದು.

-ಕೆ.ಎಚ್.ಮುನಿಯಪ್ಪ, ಆಹಾರ ಸಚಿವ

ADVERTISEMENT

ಪ್ರಶ್ನೆ: ರಾಜೇಶ್‌ ನಾಯಕ್‌, ಬಿಜೆಪಿ ಮತ್ತು ಬಾಲಕೃಷ್ಣ ಸಿ.ಎನ್‌, ಜೆಡಿಎಸ್‌

****

11 ಸ್ಥಳೀಯ ಸಂಸ್ಥೆಗಳ ವಿರುದ್ಧ ಕ್ರಿಮಿನಲ್ ಪ್ರಕರಣ

ಕಾವೇರಿ, ಕಬಿನಿ, ಅರ್ಕಾವತಿ, ತುಂಗಭದ್ರಾ, ಭದ್ರಾ ಸೇರಿ ವಿವಿಧ ನದಿಗಳಿಗೆ ಸಂಸ್ಕರಿಸದ ಗೃಹ ತ್ಯಾಜ್ಯ ನೀರು ಹರಿಯುತ್ತಿದ್ದು, ನದಿ ದಂಡೆಯ 11 ನಗರ ಮತ್ತು ಪುರಸಭೆಗಳ ವಿರುದ್ಧ ಕ್ರಿಮಿನಲ್‌ ಪ್ರಕರಣಗಳು ದಾಖಲಾಗಿವೆ. ಇವು ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣಾ ಹಂತದಲ್ಲಿವೆ. 12 ನದಿಗಳ ಪಾತ್ರದಲ್ಲಿ 30 ಸ್ಥಳೀಯ ಸಂಸ್ಥೆಗಳಿದ್ದು, ಇಲ್ಲಿ 814 ಎಂಎಲ್‌ಡಿ ಗೃಹ ತ್ಯಾಜ್ಯ ನೀರು ಉತ್ಪತ್ತಿ ಆಗುತ್ತಿದೆ. 614 ಎಂಎಲ್‌ಡಿ ಸಂಸ್ಕರಣೆಗೆ ಮಾತ್ರ ಶುದ್ಧೀಕರಣ ಘಟಕ ಇದೆ. 203 ಎಂಎಲ್‌ಡಿ ಜಲ ಶುದ್ಧೀಕರಣಕ್ಕೆ ಘಟಕಗಳಿಲ್ಲ. ಆದ್ದರಿಂದ ನಿಯಮಿತವಾಗಿ ಜಲ ತಪಾಸಣೆ ಮಾಡಲಾಗುತ್ತಿದೆ. ಜಲ ಶುದ್ಧೀಕರಣಕ್ಕೆ ಕ್ರಮ ವಹಿಸಲು ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಲಾಗಿದೆ

-ಈಶ್ವರ ಖಂಡ್ರೆ, ಅರಣ್ಯ ಸಚಿವ

ಪ್ರಶ್ನೆ: ದರ್ಶನ್ ಪುಟ್ಟಣ್ಣಯ್ಯ

****

ಹಾಳಾದ ರಸ್ತೆಗಳನ್ನು ಕಂಪನಿಗಳೇ ನಿರ್ಮಿಸಬೇಕು

ಪವನ ವಿದ್ಯುತ್ ಕಂಪನಿಗಳು ವಿಂಡ್‌ ಟರ್ಬೈನ್‌ ಅಳವಡಿಸಲು ದೊಡ್ಡ ಗಾತ್ರದ ವಾಹನಗಳನ್ನು ಬಳಸಿದ ವೇಳೆ ಗ್ರಾಮೀಣ ರಸ್ತೆಗಳು ಹಾಳಾದರೆ, ಸಂಬಂಧಪಟ್ಟ ಕಂಪನಿಗಳೇ ಹಾಳಾದ ರಸ್ತೆಗಳನ್ನು ನಿರ್ಮಿಸಿಕೊಡು ವಂತೆ ಇಲಾಖೆ ನಿರ್ದೇಶನ ನೀಡಿದೆ. ರಾಜ್ಯದಲ್ಲಿ ಈಗ 7,300 ಮೆಗಾವಾಟ್‌ ಪವನ ವಿದ್ಯುತ್‌ ಉತ್ಪಾದನೆ ಆಗುತ್ತಿದೆ. ಸೌರ ಮತ್ತು ಪವನ ಸೇರಿ ಹೈಬ್ರೀಡ್‌ ವಿದ್ಯುತ್‌ ಉತ್ಪಾದನೆಗೆ ಸರ್ಕಾರ ಆದ್ಯತೆ ನೀಡಿದೆ

-ಕೆ.ಜೆ.ಜಾರ್ಜ್‌, ಇಂಧನ ಸಚಿವ

ಪ್ರಶ್ನೆ: ದೊಡ್ಡನಗೌಡ ಎಚ್‌. ಪಾಟೀಲ, ಬಿಜೆಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.