ಬೆಂಗಳೂರು: ಕರ್ನಾಟಕ ಜನಸಂದಣಿ ನಿಯಂತ್ರಣ ಮಸೂದೆಯ ಸಮಗ್ರ ಪರಿಶೀಲನೆಗಾಗಿ ಗೃಹ ಸಚಿವ ಜಿ.ಪರಮೇಶ್ವರ ಅವರ ಅಧ್ಯಕ್ಷತೆಯಲ್ಲಿ ಪರಿಶೀಲನಾ ಸಮಿತಿ ರಚಿಸಿ ಆದೇಶ ಹೊರಡಿಸಲಾಗಿದೆ.
ಈ ಸಮಿತಿಯಲ್ಲಿ ಕಾನೂನು ಸಚಿವ ಎಚ್.ಕೆ.ಪಾಟೀಲ, ಶಾಸಕರಾದ ರಿಜ್ವಾನ್ ಅರ್ಷದ್, ಎನ್.ಶ್ರೀನಿವಾಸ, ಡಿ. ರವಿಶಂಕರ್, ಶ್ರೀನಿವಾಸ ಮಾನೆ, ಪ್ರಕಾಶ್ ಕೋಳಿವಾಡ, ಎಚ್.ಡಿ.ತಮ್ಮಯ್ಯ, ವಿ.ಸುನಿಲ್‌ಕುಮಾರ್, ಎಸ್.ಆರ್.ವಿಶ್ವನಾಥ್ ಮತ್ತು ಜಿ.ಡಿ.ಹರೀಶ್‌ಗೌಡ ಸದಸ್ಯರಾಗಿದ್ದಾರೆ. ವರದಿ ನೀಡಲು ಮೂರು ತಿಂಗಳ ಕಾಲ ಮಿತಿ ನಿಗದಿ ಮಾಡಲಾಗಿದೆ.
ಭೂಕಂದಾಯ ಪರಿಶೀಲನಾ ಸಮಿತಿ:
ಕರ್ನಾಟಕ ಭೂ ಕಂದಾಯ (ಎರಡನೇ ತಿದ್ದುಪಡಿ) ಮಸೂದೆಯ ಸಮಗ್ರ ಪರಿಶೀಲನೆಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ.
ಕಾನೂನು ಸಚಿವ ಎಚ್.ಕೆ.ಪಾಟೀಲ, ಶಾಸಕರಾದ ಎ.ಎಸ್.ಪೊನ್ನಣ್ಣ, ಡಾ.ಮಂಥರ್‌ಗೌಡ, ಎಚ್.ವಿ.ವೆಂಕಟೇಶ್, ಡಾ.ಶ್ರೀನಿವಾಸ್ ಎನ್.ಟಿ, ಗಣೇಶ್ ಹುಕ್ಕೇರಿ, ಭೀಮಣ್ಣ ಟಿ.ನಾಯ್ಕ, ಅರವಿಂದ ಬೆಲ್ಲದ, ಡಾ.ಸಿ.ಎನ್.ಅಶ್ವತ್ಥನಾರಾಯಣ ಮತ್ತು ಎಂ.ಟಿ.ಕೃಷ್ಣಪ್ಪ ಅವರು ಸದಸ್ಯರಾಗಿದ್ದಾರೆ. ವರದಿಗೆ ಮೂರು ತಿಂಗಳ ಕಾಲಮಿತಿ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.