ADVERTISEMENT

ಫಲಿತಾಂಶ: ಹುಣಸೂರಿನಲ್ಲಿ ಎಚ್.ವಿಶ್ವನಾಥ್, ಹೊಸಕೋಟೆಯಲ್ಲಿ ಎಂಟಿಬಿಗೆ ಹಿನ್ನಡೆ

ಕುತೂಹಲ ಕೆರಳಿಸಿದ್ದ ಕ್ಷೇತ್ರಗಳಲ್ಲಿ ಬಿಜೆಪಿಗೆ ಹಿನ್ನಡೆ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2019, 4:28 IST
Last Updated 9 ಡಿಸೆಂಬರ್ 2019, 4:28 IST
ಎಚ್.ವಿಶ್ವನಾಥ್ ಮತ್ತು ಎಂಟಿಬಿ ನಾಗರಾಜ್
ಎಚ್.ವಿಶ್ವನಾಥ್ ಮತ್ತು ಎಂಟಿಬಿ ನಾಗರಾಜ್   

ಬೆಂಗಳೂರು:ತೀವ್ರ ಕುತೂಹಲ ಕೆರಳಿಸಿರುವ ಹುಣಸೂರು ಮತ್ತು ಹೊಸಕೋಟೆ ಕ್ಷೇತ್ರಗಳಲ್ಲಿ ಬಿಜೆಪಿಗೆ ಭಾರಿ ಹಿನ್ನಡೆಯಾಗಿದೆ. ಹುಣಸೂರಿನಲ್ಲಿ ಬಿಜೆಪಿಯ ಎಚ್.ವಿಶ್ವನಾಥ್‌ಗೆ ಕಾಂಗ್ರೆಸ್ ಅಭ್ಯರ್ಥಿಎಚ್.ಪಿ.ಮಂಜುನಾಥ್ ವಿರುದ್ಧ ಸಾವಿರಾರು ಮತಗಳ ಹಿನ್ನಡೆಯಾಗಿದೆ. ಹೊಸಕೋಟೆಯಲ್ಲಿ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ವಿರುದ್ಧ ಬಿಜೆಪಿಯ ಎಂ.ಟಿ.ಬಿ. ನಾಗರಾಜ್‌ಗೆ ಹಿನ್ನಡೆಯಾಗಿದೆ.

ಹೊಸಕೋಟೆಯಲ್ಲಿ 2ನೇ ಸುತ್ತಿನ ಮತ ಎಣಿಕೆ ಮುಕ್ತಾಯ‌ವಾದಾಗ ಶರತ್ ಬಚ್ಚೇಗೌಡ (ಪಕ್ಷೇತರ)8,780 ಮತ ಗಳಿಸಿದ್ದು, ನಾಗರಾಜ್ (ಬಿಜೆಪಿ) 4,960 ಮತ ಗಳಿಸಿದ್ದಾರೆ. ಕಾಂಗ್ರೆಸ್ 3,151 ಮತ ಗಳಿಸಿದೆ. 3ನೇ ಸುತ್ತಿನಲ್ಲೂ ಶರತ್5,528 ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಹುಣಸೂರಿನಲ್ಲಿನಾಲ್ಕನೇ ಸುತ್ತಿನ ಮತ ಎಣಿಕೆ ಪೂರ್ಣಗೊಂಡಾಗ ಕಾಂಗ್ರೆಸ್‌ನ ಎಚ್.ಪಿ.ಮಂಜುನಾಥ್ 16,990 ಗಳಿಸಿದ್ದರೆ ಬಿಜೆಪಿಯ ಎಚ್.ವಿಶ್ವನಾಥ್ 11,597 ಮತ ಗಳಿಸಿದ್ದಾರೆ. ಜೆಡಿಎಸ್‌ನ ದೇವರಹಳ್ಳಿ ಸೋಮಶೇಖರ್ 8,247 ಮತ ಗಳಿಸಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ 5,393 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.