ADVERTISEMENT

Covid-19 Karnataka: ಕೋವಿಡ್: ಮೃತರ ಸಂಖ್ಯೆ 2,055ಕ್ಕೆ ಏರಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಜುಲೈ 2020, 18:28 IST
Last Updated 28 ಜುಲೈ 2020, 18:28 IST
ಕೊರೊನಾ ವೈರಸ್ ಸೋಂಕು ಪರೀಕ್ಷೆಗೆ ಗಂಟಲು ದ್ರವ ಮಾದರಿ ಸಂಗ್ರಹಿಸುತ್ತಿರುವುದು–ಸಾಂದರ್ಭಿಕ ಚಿತ್ರ
ಕೊರೊನಾ ವೈರಸ್ ಸೋಂಕು ಪರೀಕ್ಷೆಗೆ ಗಂಟಲು ದ್ರವ ಮಾದರಿ ಸಂಗ್ರಹಿಸುತ್ತಿರುವುದು–ಸಾಂದರ್ಭಿಕ ಚಿತ್ರ   
""

ಬೆಂಗಳೂರು:ಕೊರೊನಾ ಸೋಂಕಿತರಲ್ಲಿ ಮತ್ತೆ 102 ಮಂದಿ ಮೃತಪಟ್ಟಿರುವುದು ಮಂಗಳವಾರ ದೃಢಪಟ್ಟಿದೆ. ಇದರಿಂದಾಗಿ ರಾಜ್ಯದಲ್ಲಿ ಕೋವಿಡ್‌ನಿಂದ ಸಾವಿಗೀಡಾದವರ ಸಂಖ್ಯೆ 2 ಸಾವಿರದ ಗಡಿ (2,055) ದಾಟಿದೆ.

ಹೊಸದಾಗಿ ಬೆಂಗಳೂರಿನಲ್ಲಿ 1,898 ಸೇರಿದಂತೆ ರಾಜ್ಯದಲ್ಲಿ 5,536 ಮಂದಿ ಕೋವಿಡ್ ಪೀಡಿತರಾಗಿದ್ದಾರೆ. ಇದರಿಂದಾಗಿ ಸೋಂಕಿತರ ಸಂಖ್ಯೆ 1,07,001ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಸೋಂಕು ಪತ್ತೆಯಾದ ನಂತರ ಮೊದಲ ನಾಲ್ಕು ತಿಂಗಳಲ್ಲಿ (ಜೂ.30ರ ವೇಳೆಗೆ) 15,242 ಮಂದಿ ಸೋಂಕಿತರಾಗಿದ್ದರು. ನಂತರದ 28 ದಿನಗಳಲ್ಲಿ 91,759 ಮಂದಿಗೆ ಸೋಂಕು ಹರಡಿದೆ. ಈ ಅವಧಿಯಲ್ಲಿ ಸೋಂಕಿತ 1,809 ಮಂದಿ ಮೃತಪಟ್ಟಿರುವುದು ಕೂಡ ಖಚಿತಪಟ್ಟಿದೆ.

ಚೇತರಿಸಿಕೊಳ್ಳುವವರ ಸಂಖ್ಯೆಯೂ ಹೆಚ್ಚಳವಾಗುತ್ತಿದ್ದು, ಮತ್ತೆ 2,819 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ.

ADVERTISEMENT

ಒಂದೇ ದಿನ ಬಳ್ಳಾರಿಯಲ್ಲಿ 452, ಕಲಬುರ್ಗಿಯಲ್ಲಿ 283, ಬೆಳಗಾವಿಯಲ್ಲಿ 228, ಮೈಸೂರಿನಲ್ಲಿ 220, ತುಮಕೂರಿನಲ್ಲಿ 207, ಕೋಲಾರದಲ್ಲಿ 174, ದಕ್ಷಿಣ ಕನ್ನಡದಲ್ಲಿ 173, ಧಾರವಾಡದಲ್ಲಿ 173 ಹಾಗೂ ವಿಜಯಪುರದಲ್ಲಿ 153 ಸೋಂಕು ದೃಢಪಟ್ಟ ಪ್ರಕರಣಗಳು ದಾಖಲಾಗಿವೆ.

ರಾಜ್ಯದ ಕೋವಿಡ್ ಅಂಕಿ–ಅಂಶ

1,07,001 ಒಟ್ಟು ಸೋಂಕಿತರು

ಮಂಗಳವಾರ ದೃಢಪಟ್ಟ ಪ್ರಕರಣಗಳು; 5,536

ಸಕ್ರಿಯ ಪ್ರಕರಣಗಳು; 64,434

ಗುಣಮುಖರಾದವರು; 40,504

ಮಂಗಳವಾರ ಗುಣಮುಖರಾದವರು; 2,819

ಒಟ್ಟು ಮೃತಪಟ್ಟವರು; 2,055

ಮಂಗಳವಾರ ದೃಢಪಟ್ಟ ಸಾವು ಪ್ರಕರಣಗಳು; 102

ಐಸಿಯುನಲ್ಲಿ ಇರುವವರು; 612

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.