ADVERTISEMENT

ಸ್ಪರ್ಧಾತ್ಮಕ ಪರೀಕ್ಷೆಗಷ್ಟೇ 'ಐದು ಉತ್ತರಗಳ' ಆಯ್ಕೆ: ಎಚ್‌. ಪ್ರಸನ್ನ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2025, 9:22 IST
Last Updated 6 ಮಾರ್ಚ್ 2025, 9:22 IST
<div class="paragraphs"><p>ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್‌. ಪ್ರಸನ್ನ</p></div>

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್‌. ಪ್ರಸನ್ನ

   

ಬೆಂಗಳೂರು: ಪ್ರತಿ ಪ್ರಶ್ನೆಗೆ ಉತ್ತರ ನೀಡಲು ಐದು ಆಯ್ಕೆಗಳನ್ನು ಒಳಗೊಂಡ ಹೊಸ ವಿಧಾನವು  ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾತ್ರ ಅನ್ವಯವಾಗುತ್ತದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್‌. ಪ್ರಸನ್ನ ಹೇಳಿದ್ದಾರೆ.

ಎಂಜಿನಿಯರಿಂಗ್‌ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಗೆ  (ಸಿಇಟಿ) ಈ ವಿಧಾನ ಅನ್ವಯವಾಗುವುದಿಲ್ಲ. ಸಿಇಟಿ ಪರೀಕ್ಷಾ ವಿಧಾನ ಈ ಹಿಂದಿನಂತೆಯೇ ಇರಲಿದೆ  ಎಂದು ಸ್ಪಷ್ಟಪಡಿಸಿದ್ದಾರೆ. 

ADVERTISEMENT

ವಿವಿಧ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳಿಗೆ ಕೆಇಎ ನಡೆಸುವ ಎಲ್ಲ ಪರೀಕ್ಷೆಗಳಲ್ಲೂ ಪ್ರತಿ ಪ್ರಶ್ನೆಗೆ ಉತ್ತರ ನೀಡಲು ಇದುವರೆಗೆ ನಾಲ್ಕು ಆಯ್ಕೆಗಳು ಇದ್ದವು. ಪರೀಕ್ಷಾ ಅಕ್ರಮ ತಡೆಯಲು ಪ್ರಾಧಿಕಾರ ಐದು ಆಯ್ಕೆಗಳ ವಿಧಾನ ಅಳವಡಿಸಿಕೊಂಡಿದೆ. ಒಬ್ಬ ವಿದ್ಯಾರ್ಥಿ ನಿರ್ದಿಷ್ಟ ಪ್ರಶ್ನೆಗೆ ಉತ್ತರಿಸದಿದ್ದರೆ, ಅವರು ಆಪ್ಟಿಕಲ್‌ ಮಾರ್ಕ್‌ ರೆಕಗ್ನಿಷನ್ (ಒಎಂಆರ್) ಹಾಳೆಯಲ್ಲಿ ಒದಗಿಸಲಾದ ಐದನೇ ಆಯ್ಕೆಗೆ ಮಾರ್ಕ್‌ ಮಾಡಬಹುದು.

ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಪರೀಕ್ಷೆಗಳಲ್ಲಿ ಕೆಲವರು ಪರೀಕ್ಷೆಯ ನಂತರ ಒಎಂಆರ್ ಹಾಳೆ ತಿದ್ದಿದ್ದ ಪ್ರಕರಣಗಳು ವರದಿಯಾಗಿದ್ದವು. ಈ ಕುರಿತು ರಚಿಸಿದ್ದ ಸಮಿತಿ ಒಎಂಆರ್‌ನಲ್ಲಿ ಐದನೇ ಆಯ್ಕೆಗೆ ಶಿಫಾರಸು ಮಾಡಿತ್ತು. ಇದೇ ವಿಧಾನವನ್ನು ಕೆಇಎ ಅಳವಿಡಿಸಿ ಕೊಂಡಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.