ಪ್ರಾತಿನಿಧಿಕ ಚಿತ್ರ
ಮೆಟಾ ಎಐ
ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಪಿಜಿ–ಸಿಇಟಿ ಪ್ರಕ್ರಿಯೆಯಿಂದ ವಾಸ್ತುಶಿಲ್ಪಶಾಸ್ತ್ರ ಕೋರ್ಸ್ ಅನ್ನು ಕೈಬಿಟ್ಟಿದೆ.
ಸ್ನಾತಕೋತ್ತರ ಪದವಿಯ ವಾಸ್ತುಶಿಲ್ಪಶಾಸ್ತ್ರ ಕೋರ್ಸ್ ಸೀಟುಗಳನ್ನು ಇದುವರೆಗೂ ಸಿಇಟಿ ಮೂಲಕ ಕೆಇಎ ಭರ್ತಿ ಮಾಡುತ್ತಿತ್ತು. ಈ ವರ್ಷದಿಂದಲೇ ನಿಯಮದಲ್ಲಿ ಬದಲಾವಣೆ ಮಾಡಲಾಗಿದ್ದು, ವಾಸ್ತುಶಿಲ್ಪಶಾಸ್ತ್ರ ಪರಿಷತ್ತು ನಡೆಸುವ ರಾಷ್ಟ್ರಮಟ್ಟದ ಅರ್ಹತಾ ಪರೀಕ್ಷೆಯ ಅಂಕಗಳ ಆಧಾರದಲ್ಲೇ ಪ್ರವೇಶ ನೀಡಲು ನಿರ್ಧರಿಸಿದೆ.
‘ಪ್ರಾಧಿಕಾರ ಇನ್ನುಮುಂದೆ ಪ್ರವೇಶ ಪರೀಕ್ಷೆ ನಡೆಸುವುದಿಲ್ಲ. ಆಸಕ್ತ ವಿದ್ಯಾರ್ಥಿಗಳು ವಾಸ್ತುಶಿಲ್ಪಶಾಸ್ತ್ರ ಪರಿಷತ್ತು ನಡೆಸುವ ರಾಷ್ಟ್ರಮಟ್ಟದ ಪರೀಕ್ಷೆ ತೆಗೆದುಕೊಂಡು, ಇಲ್ಲಿನ ಸೀಟು ಹಂಚಿಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು’ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ.
ಕಳೆದ ವರ್ಷ ಈ ಕೋರ್ಸ್‌ನಲ್ಲಿ 136 ಸೀಟು ಲಭ್ಯವಿದ್ದವು. 127 ಅರ್ಜಿ ಸಲ್ಲಿಕೆಯಾಗಿದ್ದವು. ಪ್ರವೇಶ ಪಡೆದಿದ್ದು 28 ವಿದ್ಯಾರ್ಥಿಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.