ಕಲಬುರಗಿ: ‘ವಿಬಿ–ಜಿ ರಾಮ್ ಜಿ ಕಾಯ್ದೆ ಹಾಗೂ ಖಾಸಗಿ ಹೂಡಿಕೆಗೆ ಅಣುಶಕ್ತಿ ಕ್ಷೇತ್ರ ಮುಕ್ತಗೊಳಿಸುವ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಬಹಳ ಗಡಿಬಿಡಿಯಲ್ಲಿ ಜಾರಿಗೊಳಿಸುತ್ತಿದೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಲ್ಲಿ ತರಾಟೆಗೆ ತೆಗೆದುಕೊಂಡರು.
ಸುದ್ದಿಗಾರರ ಜೊತೆಗೆ ಮಾತನಾಡಿದ ಅನರು, ‘ಮನರೇಗಾ ಯೋಜನೆಗೆ ಮಹಾತ್ಮಗಾಂಧಿ ಹೆಸರು ಇದ್ದಿದ್ದರೆ ತೊಂದರೆ ಏನಿತ್ತು? ಈಗ ಜಿ–ರಾಮ್–ಜಿ ಇಟ್ಟಿದ್ದರಿಂದ ಏನು ಸಾಧಿಸಿದಂತಾಯಿತು’ ಎಂದು ಪ್ರಶ್ನಿಸಿದರು.
‘ಯುಪಿಎ ಆಡಳಿತಾವಧಿಯಲ್ಲಿ ಕಾಂಗ್ರೆಸ್ ಸರ್ಕಾರವು ಬಡವರಿಗಾಗಿ ಹಕ್ಕುಗಳ ರೂಪದಲ್ಲಿ ಕಾಯ್ದೆಗಳನ್ನು ಜಾರಿಗೊಳಿಸಿತ್ತು. ಆ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಒಂದೊಂದಾಗಿ ನಾಶ ಮಾಡುತ್ತಿದೆ’ ಎಂದರು.
‘ಮನರೇಗಾ ಹೆಸರನ್ನು ಬರೀ ವಿಬಿ–ಜಿ ರಾಮ್ ಜಿ ಎಂದು ಬದಲಿಸಿಲ್ಲ. ಬದಲಿಗೆ ರೈಟ್ ಟು ವರ್ಕ್ (ಕೆಲಸದ ಹಕ್ಕು) ತೆಗೆದು, ತಮಗೆ ಬೇಕಾದಲ್ಲಿ, ಬೇಕಾದವರಿಗೆ ಮಾತ್ರವೇ ಕೆಲಸ ನೀಡುವಂತೆ ಬದಲಿಸಿದೆ. ಇದು ದೊಡ್ಡ ತಪ್ಪು. ಇದರ ವಿರುದ್ಧ ರಾಷ್ಟ್ರದಾದ್ಯಂತ ಚಳವಳಿ ನಡೆಸಲಾಗುವುದು’ ಎಂದು ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.