ADVERTISEMENT

ಸಂತ್ರಸ್ತರಿಗೆ ನೆರವು: ದೇಗುಲಗಳ ಹುಂಡಿಗೇ ಕೈ ಹಾಕಿದ ಸರ್ಕಾರ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2018, 20:32 IST
Last Updated 21 ಆಗಸ್ಟ್ 2018, 20:32 IST
   

ಬೆಂಗಳೂರು: ಕರಾವಳಿ ಹಾಗೂ ಮಲೆನಾಡಿನ ಪ್ರವಾಹ ಪರಿಹಾರಕ್ಕೆ ರಾಜ್ಯದ 81 ದೇವಸ್ಥಾನಗಳ ಹುಂಡಿಯಲ್ಲಿರುವ ಒಟ್ಟು ₹12.30 ಕೋಟಿ ನೀಡುವಂತೆ ಮುಜರಾಯಿ ಇಲಾಖೆ ಮಂಗಳವಾರ ಆದೇಶ ಹೊರಡಿಸಿದೆ. ಈ ಮೊತ್ತವನ್ನು ಇಲಾಖೆಯ ಖಾತೆಗೆ ಜಮೆ ಮಾಡಬೇಕು ಎಂದೂ ಸೂಚಿಸಲಾಗಿದೆ.

‌ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ₹3 ಕೋಟಿ, ನಂಜನಗೂಡು ಶ್ರೀಕಂಠೇಶ್ವರ, ಕೊಲ್ಲೂರು ಮೂಕಾಂಬಿಕಾ ಹಾಗೂ ಮೈಸೂರು ಚಾಮುಂಡೇಶ್ವರಿ ದೇವಸ್ಥಾನ ತಲಾ ₹1 ಕೋಟಿ, ಕಟೀಲು ದುರ್ಗಾಪರಮೇಶ್ವರಿ ₹75 ಲಕ್ಷ, ಬೆಂಗಳೂರಿನ ಬನಶಂಕರಿ, ದೊಡ್ಡಬಳ್ಳಾಪುರದ ಘಾಟಿ ಸುಬ್ರಹ್ಮಣ್ಯ ಸ್ವಾಮಿ, ಸವದತ್ತಿ ಯಲ್ಲಮ್ಮ, ಕೊಪ್ಪಳ ಹುಲಿಗೆಮ್ಮ, ಮಂದಾರ್ತಿ ತಲಾ ₹50 ಲಕ್ಷ ನೀಡಬೇಕು ಎಂದು ಸೂಚಿಸಲಾಗಿದೆ. ಉಳಿದ ದೇವಸ್ಥಾನಗಳ ಮೊತ್ತ ₹ 25 ಸಾವಿರದಿಂದ ₹25 ಲಕ್ಷದ ನಡುವೆ ಇದೆ.

ಪ್ರತ್ಯೇಕ ಕೌಂಟರ್‌

ADVERTISEMENT

ಕೆಲವು ಸಂಘ ಸಂಸ್ಥೆಗಳು ಹಾಗೂ ಭಕ್ತರು ಧನಸಹಾಯ ನೀಡಲು ಮುಂದೆ ಬಂದಿದ್ದಾರೆ. ಇದಕ್ಕಾಗಿ ಪ್ರಮುಖ ದೇವಸ್ಥಾನಗಳಲ್ಲಿ ಪ್ರತ್ಯೇಕ ಕೌಂಟರ್ ಆರಂಭಿಸಬೇಕು. ಆಯ್ದ ದೇವಸ್ಥಾನಗಳು ನಿಧಿಯಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ ಉದಾರವಾಗಿ ದೇಣಿಗೆ ನೀಡಬೇಕು ಎಂದು ಮುಜರಾಯಿ ಸಚಿವರು ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.