ADVERTISEMENT

ಕ್ಷೀರಭಾಗ್ಯ ಯೋಜನೆಗೆ ದಶಕದ ಸಂಭ್ರಮ: ಸಂತಸ ಹಂಚಿಕೊಂಡ ಸಿಎಂ ಸಿದ್ದರಾಮಯ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಸೆಪ್ಟೆಂಬರ್ 2023, 11:00 IST
Last Updated 6 ಸೆಪ್ಟೆಂಬರ್ 2023, 11:00 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ಕಾಂಗ್ರೆಸ್‌ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ ‘ಕ್ಷೀರಭಾಗ್ಯ’ ಯೋಜನೆ ಜಾರಿಯಾಗಿ 10 ವರ್ಷಗಳ ಪೂರೈಸಿವೆ.

‘ಕ್ಷೀರಭಾಗ್ಯ’ ಯೋಜನೆಯ ದಶಕದ ಸಂಭ್ರಮವನ್ನು ಸಾಮಾಜಿಕ ಮಾಧ್ಯಮ ‘ಎಕ್ಸ್‌’ನಲ್ಲಿ ಮೆಲುಕು ಹಾಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ‘2013ರಲ್ಲಿ ನಾವು ಕ್ಷೀರಭಾಗ್ಯ ಯೋಜನೆಗೆ ಚಾಲನೆ ನೀಡಿದ ವೇಳೆ ಒಂದನೇ ತರಗತಿಯಲ್ಲಿ ಬಿಸಿ ಹಾಲು ಕುಡಿಯಲಾರಂಭಿಸಿದ ಮಗುವೊಂದು ಈಗ ಹತ್ತನೇ ತರಗತಿಯ ಪ್ರೌಡ ವಿದ್ಯಾರ್ಥಿಯಾಗಿ ಕ್ಷೀರಭಾಗ್ಯ ಯೋಜನೆಯಿಂದ ತನ್ನ ದೇಹಕ್ಕೆ ಬಲ ಬಂತು, ಓದಲು ಹುಮ್ಮಸ್ಸು ಬಂತು ಎಂದೆಲ್ಲ ಹೇಳುತ್ತಿರುವುದನ್ನು ಕೇಳಿದಾಗ ಯೋಜನೆಯ ಉದ್ದೇಶ ಸಾರ್ಥಕವಾಯಿತು ಎಂದು ಅನಿಸುತ್ತದೆ’ ಎಂದು ತಿಳಿಸಿದ್ದಾರೆ.

ಕ್ಷೀರಭಾಗ್ಯ ಯೋಜನೆ ಮಕ್ಕಳ ದೈಹಿಕ, ಮಾನಸಿಕ ಮತ್ತು ಕಲಿಕಾ ಸಾಮರ್ಥ್ಯ ವೃದ್ಧಿಸಿ, ಶಿಕ್ಷಣ ಕ್ಷೇತ್ರದಲ್ಲಿ ಪರಿವರ್ತನೆಗೆ ಕಾರಣವಾಗಿದೆ. ಕ್ಷೀರಭಾಗ್ಯ ಯೋಜನೆ ಇನ್ನಷ್ಟು ತಲೆಮಾರುಗಳವರೆಗೆ ನಾಡಿನ ಮಕ್ಕಳನ್ನು ಪೋಷಿಸಲಿ ಎಂದು ಯೋಜನೆಯು ದಶಕ ಪೂರೈಸಿದ ಈ ಹೊತ್ತಿನಲ್ಲಿ ಹಾರೈಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ADVERTISEMENT

‘ನಮ್ಮ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ ‘ಕ್ಷೀರಭಾಗ್ಯ’ ಯೋಜನೆ ಜಾರಿಯಾಗಿ ಇಂದಿಗೆ 10 ವರ್ಷ ಪೂರೈಸಿದೆ. ಕಾಂಗ್ರೆಸ್ ಸರ್ಕಾರದ ದೃಷ್ಟಿಕೋನವು ಸದಾ ಜನರ ಪರವಾಗಿಯೇ ಇರುತ್ತದೆ ಎಂಬುದಕ್ಕೆ ಹಲವು ಯೋಜನೆಗಳು ಸಾಕ್ಷಿ ನುಡಿಯುತ್ತವೆ. ಕ್ಷೀರಭಾಗ್ಯ ಯೋಜನೆ ಮಕ್ಕಳ ಅಪೌಷ್ಟಿಕತೆ ನಿವಾರಿಸುವಲ್ಲಿ ಗಣನೀಯ ಪಾತ್ರ ವಹಿಸಿದ್ದು, ಮಕ್ಕಳನ್ನು ಶಿಕ್ಷಣದತ್ತ ಸೆಳೆಯಲು ಹಾಗೂ ಹೈನುಗಾರಿಕೆಯನ್ನು ಉತ್ತೇಜಿಸುವಲ್ಲಿ ಮಹತ್ತರ ಪಾತ್ರವಹಿಸಿದೆ’ ಎಂದು ಕಾಂಗ್ರೆಸ್‌ ‘ಎಕ್ಸ್‌’ನಲ್ಲಿ ಬರೆದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.