ADVERTISEMENT

ವಿಧಾನಪರಿಷತ್ ಚುನಾವಣೆ: ತಲುಪಿದ ಮುಂಗಡ- ‘ಪೇಮೆಂಟ್‌’ ಬಾಕಿ

ಚುನಾವಣಾ ಅಖಾಡದಲ್ಲಿ ರವಾನೆಯಾಗುತ್ತಿದೆ ತರಹೇವಾರಿ ಸಂದೇಶ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2021, 22:56 IST
Last Updated 7 ಡಿಸೆಂಬರ್ 2021, 22:56 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಚಿತ್ರದುರ್ಗ/ದಾವಣಗೆರೆ/ಶಿವಮೊಗ್ಗ: ವಿಧಾನಪರಿಷತ್ತಿಗೆ ನಡೆಯುತ್ತಿರುವ ಚುನಾವಣೆಯ ಚಿತ್ರದುರ್ಗ–ದಾವಣಗೆರೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಲ್ಲಿ ಕೆಲ ಅಭ್ಯರ್ಥಿಗಳು ಮತದಾರರಿಗೆ ಮುಂಗಡವಾಗಿ ತಲುಪಿಸಿದ್ದಾರೆ. ಮತದಾನದ ದಿನ ‘ಫುಲ್‌ ಪೇಮೆಂಟ್‌’ ತಲುಪಿಸುವ ಆಶ್ವಾಸನೆ ನೀಡಿದ್ದಾರೆ.

‘ಪೇಮೆಂಟ್‌’ ಪಾವತಿಯಲ್ಲಿಯೂ ಅಭ್ಯರ್ಥಿಗಳ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಒಂದು ಮತಕ್ಕೆ ಎಷ್ಟು ಹಣ ನೀಡಲಾಗುತ್ತದೆ ಎಂಬ ಸಂಗತಿಯನ್ನು ರಾಷ್ಟ್ರೀಯ ಪಕ್ಷದ ಇಬ್ಬರೂ ಅಭ್ಯರ್ಥಿಗಳು ಬಹಿರಂಗಪಡಿಸಿಲ್ಲ. ಬಿಜೆಪಿಗಿಂತ ಹೆಚ್ಚು ‘ಪೇಮೆಂಟ್‌’ ಮಾಡುವ ಸಂದೇಶವನ್ನು ಕಾಂಗ್ರೆಸ್‌ ಮತದಾರರಿಗೆ ತಲುಪಿಸಿದೆ.

ಬಿಜೆಪಿ ಮತ್ತು ಕಾಂಗ್ರೆಸ್‌ ಅಭ್ಯರ್ಥಿಗಳು ಕ್ಷೇತ್ರ ವ್ಯಾಪ್ತಿಯ ಪ್ರತಿ ತಾಲ್ಲೂಕು ಸುತ್ತಿ ಮತಯಾಚನೆ ಮಾಡಿದ್ದಾರೆ. ಗ್ರಾಮ ಪಂಚಾಯಿತಿ ಸದಸ್ಯರೇ ನಿರ್ಣಾಯಕವಾಗಿರುವ ಕಾರಣಕ್ಕೆ ಹೋಬಳಿಗೂ ತೆರಳಿ ಮತ ಸೆಳೆಯುವ ಪ್ರಯತ್ನ ನಡೆಸಿದ್ದಾರೆ. ಹೀಗೆ ಮತಯಾಚನೆಗೆ ತೆರಳಿದಾಗ ₹ 5 ಸಾವಿರದವರೆಗೆ ಅಡ್ವಾನ್ಸ್‌ ತಲುಪಿಸಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ADVERTISEMENT

ಮತವೊಂದಕ್ಕೆ ಬಿಜೆಪಿ ₹ 30 ಸಾವಿರದಿಂದ ₹40 ಸಾವಿರ ಹಾಗೂ ಕಾಂಗ್ರೆಸ್‌ ₹ 50 ಸಾವಿರ ನೀಡುವ ಬಗ್ಗೆ ಅಖಾಡದಲ್ಲಿ ಚರ್ಚೆಗಳು ನಡೆಯುತ್ತಿವೆ. ಅಭ್ಯರ್ಥಿಯೊಬ್ಬರು ನೀಡಿದ ಹಣಕ್ಕೆ ಹೆಚ್ಚುವರಿಯಾಗಿ ಮತ್ತೊಬ್ಬರು ತಲುಪಿಸುವ ಪೈಪೋಟಿಯಲ್ಲಿದ್ದಾರೆ. ಎರಡೂ ಪಕ್ಷ
ಗಳ ವತಿಯಿಂದ ಗ್ರಾಮ ಪಂಚಾಯಿತಿ ಸದಸ್ಯರಿಗೆ ಬಟ್ಟೆ ವಿತರಿಸಲಾಗುತ್ತಿದೆ.

ಶಿವಮೊಗ್ಗ ಕ್ಷೇತ್ರದಲ್ಲಿ ಬಿಜೆಪಿ ₹ 25 ಸಾವಿರ ಹಾಗೂ ಕಾಂಗ್ರೆಸ್‌ ₹ 20 ಸಾವಿರ ನೀಡುವ ಮಾತುಗಳು ಕೇಳಿ
ಬರುತ್ತಿವೆ. ಮತದಾನದ ಹಿಂದಿನ ದಿನವಾದ ಡಿ.9ರಂದು ರಾತ್ರಿ ಇದು ಬಹಿರಂಗವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.