ADVERTISEMENT

ಲಾಕ್‌ಡೌನ್‌ 2.0: ಮೇ 3ರವರೆಗೂ ಮದ್ಯ, ತಂಬಾಕು, ಗುಟ್ಕಾ ಮಾರಾಟ ನಿಷೇಧ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2020, 10:29 IST
Last Updated 15 ಏಪ್ರಿಲ್ 2020, 10:29 IST
   

ಬೆಂಗಳೂರು: ಏಪ್ರಿಲ್‌ 15ರಿಂದ ಮದ್ಯ ಮಾರಾಟಕ್ಕೆ ಅವಕಾಶ ಸಿಗಲಿದೆ ಎಂಬ ನಿರೀಕ್ಷೆಯಲ್ಲಿದ್ದವರಿಗೆ ನಿರಾಶೆಯಾಗಿದ್ದುಮೇ 3ರವರೆಗೂ ಮಧ್ಯ ಮಾರಾಟವನ್ನು ನಿಷೇಧಿಸಲಾಗಿದೆ.

ದೇಶದಲ್ಲಿ ಎರಡನೇ ಹಂತದ ಲಾಕ್‌ಡೌನ್‌ ವಿಸ್ತರಣೆಯಾಗಿದ್ದು ಮೇ 3ರವರೆಗೂ ಭಾರತ ಸಂಪೂರ್ಣ ಸ್ತಬ್ದವಾಗಲಿದೆ. ಬುಧವಾರ ಕೇಂದ್ರ ಸರ್ಕಾರ ಮಾರ್ಗಸೂಚಿಯನ್ನು ಹೊರಡಿಸಿದ್ದು ಮದ್ಯ ಮಾರಾಟವನ್ನು ನಿಷೇಧಿಸಿದೆ.

ಎಲ್ಲಾ ರೀತಿಯ ಮದ್ಯ ಮಾರಾಟಕ್ಕೆನಿಷೇಧ ಹಾಕಿರುವ ಕೇಂದ್ರ ಸರ್ಕಾರ ಬಾರ್, ಕ್ಲಬ್, ಪಬ್‌ಗಳನ್ನು ಕೂಡ ಮೇ 3ರವರೆಗೂ ತೆರೆಯುವಂತಿಲ್ಲ ಎಂದು ಮಾರ್ಗಸೂಚಿಯಲ್ಲಿ ಹೇಳಿದೆ.

ADVERTISEMENT

ತಂಬಾಕು ಉತ್ಪನ್ನಗಳು, ಗುಟ್ಕಾಮಾರಾಟವನ್ನು ಕೂಡ ಸರ್ಕಾರ ನಿಷೇಧಿಸಿದೆ.

ಕೇಂದ್ರದ ಮಾರ್ಗಸೂಚಿಗಳು ಬಂದ ಮೇಲೆ ಮದ್ಯ ಮಾರಾಟಕ್ಕೆ ಅವಕಾಶ ನೀಡುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸುಳಿವು ನೀಡಿದ್ದರು. ಇದೀಗ ಕೇಂದ್ರ ಸರ್ಕಾರವೇ ಮಾರ್ಗಸೂಚಿಯಲ್ಲಿ ನಿಷೇಧಹೇರಿರುವುದರಿಂದ ರಾಜ್ಯ ಪಾಲನೆ ಮಾಡಬೇಕಾಗಿದೆ.

ಇದರಿಂದಾಗಿ ಮದ್ಯಪ್ರಿಯರಿಗೆ ನಿರಾಶೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.